Asianet Suvarna News Asianet Suvarna News

ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ವೇಳೆ ನಾಡ ಬಂದೂಕು ಸದ್ದು, ಬೆಂಬಲಿಗರ ಪುಂಡಾಟ

Aug 18, 2021, 4:31 PM IST

ಬೆಂಗಳೂರು (ಆ. 18): ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಲ್ಲಿ ಗುಂಡಿನ ಸದ್ದು! ಕೇಂದ್ರ ಸಚಿವ ಭಗವಂತ ಖೂಬಾಗೆ ನಾಡಬಂದೂಕಿನಿಂದ ಸ್ವಾಗತಿಸಲಾಗಿದೆ. ಯಾದಗಿರಿ ತಾ. ಯರಗೋಳ ಗ್ರಾಮದಲ್ಲಿ ಖೂಬಾ ಬೆಂಬಲಿಗರು ನಾಡಬಂದೂಕಿನಿಂದ ಸ್ವಾಗತ ಕೋರಿದ್ದಾರೆ. 

ಮಂಡ್ಯ ಜಿಲ್ಲೆಯನ್ನು ನಿಮಗೆ ಬರೆದು ಕೊಟ್ಟಿದ್ದಾರಾ? ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಸವಾಲ್

ಕೇಂದ್ರ ಸರ್ಕಾರದ ನೂತನ ಸಚಿವರಿಗೆ ದೇಶಾದ್ಯಂತ ಪ್ರವಾಸ ಕೈಗೊಂಡು, ಸರ್ಕಾರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 16 ರಿಂದ 19ರ ವರೆಗೆ ಯಾತ್ರೆ ಕೈಗೊಂಡು ಸಭೆ, ಸಂವಾದಗಳನ್ನು ನಡೆಸಲಿದ್ದಾರೆ. ಇಂದು ಭಗವಂತ ಖೂಬಾ ಬೆಂಬಲಿಗರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.