Asianet Suvarna News Asianet Suvarna News

ದರ್ಶನ್ ವಿರುದ್ದ ಗಂಭೀರ ಆರೋಪ : ಗೃಹ ಸಚಿವರ ಬಳಿಯೇ ಮನವಿ

Jul 15, 2021, 11:43 AM IST

ಬೆಂಗಳೂರು (ಜು.15): ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿದ ಇಂದ್ರಜಿತ್ ಲಂಕೇಶ್ ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು ಎಂದಿದ್ದಾರೆ. ಸೆಲೆಬ್ರಿಟಿ ಮಾತು ನಡೆವಳಿಗೆ ವಿರುದ್ಧ ಮಾತನಾಡುತ್ತೇನೆ. ನಾನು ಎಂದಿಗೂ ಸಾಮಾನ್ಯರ ಪರ. ಮೈಸೂರಿನ ಪೊಲೀಸ್ ಸ್ಟೇಷನ್‌ಗಳು ಸೆಟಲ್‌ಮೆಂಟ್‌ ಸ್ಟೇಷನ್‌ಗಳಾಗಿವೆ.  

ರಮೇಶ್ ಜಾರಕಿಹೊಳಿ ನಿವಾಸಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್; ಕುತೂಹಲ ಕೆರಳಿಸಿದ ನಡೆ! ..

ನಟ ದರ್ಶನ್, ರಾಕೇಶ್ ಪಾಪಣ್ನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಒಬ್ಬ ದಲಿತ ಸಪ್ಲೈಯರ್‌ಗೆ ಹೊಡೆದಿದ್ದಾರೆ. ಇದಕ್ಕೆ ಸಾಕ್ಷ್ಯಗಳು ನನ್ನ ಬಳಿ ಇದೆ.  ಏಟು ತಿಂದವನಿಗೆ ಕಣ್ಣು ಹಾಳಾಗಿದೆ. ಆದರೆ ಅವರೆಲ್ಲಾ ಸೇರಿ ಸೆಟಲ್‌ಮೆಂಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಇಂದ್ರಜಿತ್ ಹೇಳಿದ್ದಾರೆ