ಜನಿಸಿದ ಕೆಲವೇ ಗಂಟೆಗಳಲ್ಲಿ ಕೊರೊನಾದಿಂದ ನವಜಾತ ಶಿಶು ಸಾವು
ಜನಿಸಿದ ಮೂರ್ನಾಲ್ಕು ಗಂಟೆಗಳಲ್ಲಿ ಕೋವಿಡ್‌ನಿಂದ ನವಜಾತ ಶಿಶು ಸಾವನ್ನಪ್ಪಿದೆ. ದೊಡ್ಡ ಬಳ್ಳಾಪುರ ಮೂಲದ ದಂಪತಿಗೆ ಜನಿಸಿದ್ದ ಮಗು ಇದು. ತಾಯಿಗೂ ಸೋಂಕು ತಗುಲಿದೆ. ದುರಂತ ಎಂದರೆ ಇಂತಹ ಸ್ಥಿತಿಯಲ್ಲಿ ಜೊತೆಗಿರಬೇಕಾದ ಗಂಡ, ಮಗುವಿನ ಅಂತ್ಯಸಂಸ್ಕಾರಕ್ಕೆ ಬಂದಿಲ್ಲ. ಹೆಂಡತಿಯ ಯೋಗಕ್ಷೇಮವನ್ನೂ ವಿಚಾರಿಸಿಲ್ಲ. ಒಂದು ಕಡೆ ಆಗ ತಾನೆ ಹುಟ್ಟಿದ ಮಗುವಿಲ್ಲ, ಇನ್ನೊಂದು ಕಡೆ ಜೊತೆಗಿರಬೇಕಾದ ಗಂಡನಿಲ್ಲ. ಆ ತಾಯಿಯ ಸ್ಥಿತಿ ಯಾರಿಗೂ ಬರಬಾರದು.
ಬೆಂಗಳೂರು (ಆ. 26): ಜನಿಸಿದ ಮೂರ್ನಾಲ್ಕು ಗಂಟೆಗಳಲ್ಲಿ ಕೋವಿಡ್‌ನಿಂದ ನವಜಾತ ಶಿಶು ಸಾವನ್ನಪ್ಪಿದೆ. ದೊಡ್ಡ ಬಳ್ಳಾಪುರ ಮೂಲದ ದಂಪತಿಗೆ ಜನಿಸಿದ್ದ ಮಗು ಇದು. ತಾಯಿಗೂ ಸೋಂಕು ತಗುಲಿದೆ. ದುರಂತ ಎಂದರೆ ಇಂತಹ ಸ್ಥಿತಿಯಲ್ಲಿ ಜೊತೆಗಿರಬೇಕಾದ ಗಂಡ, ಮಗುವಿನ ಅಂತ್ಯಸಂಸ್ಕಾರಕ್ಕೆ ಬಂದಿಲ್ಲ. ಹೆಂಡತಿಯ ಯೋಗಕ್ಷೇಮವನ್ನೂ ವಿಚಾರಿಸಿಲ್ಲ. ಒಂದು ಕಡೆ ಆಗ ತಾನೆ ಹುಟ್ಟಿದ ಮಗುವಿಲ್ಲ, ಇನ್ನೊಂದು ಕಡೆ ಜೊತೆಗಿರಬೇಕಾದ ಗಂಡನಿಲ್ಲ. ಆ ತಾಯಿಯ ಸ್ಥಿತಿ ಯಾರಿಗೂ ಬರಬಾರದು.
ಶಾಸಕ ಜಮೀರ್ ಅಹ್ಮದ್ ಟೀಂ JJR ನಗರದ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ನಿಜಕ್ಕೂ ಈ ದೃಶ್ಯ ಎಂಥವರಿಗೂ ಕರುಳು ಚುರುಕ್ ಎನ್ನುತ್ತದೆ.