'ರೈತರೇನು ಉಗ್ರಗಾಮಿಗಳಾ, ಕಳ್ಳರಂತೆ ಕಾಣ್ತಾರಾ'?
'ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಮುಳ್ಳು ಬೇಲಿ ಇಡೋದು, ಕಲ್ಲು ಬಂಡೆ ಇಡೋದು, ತಣ್ಣೀರು ಎರಚೋದು ಮಾಡ್ತಿದ್ದಾರೆ. ರೈತರೇನು ಉಗ್ರಗಾಮಿಗಳಾ? ಕಳ್ಳರಂತೆ ಕಾಣ್ತಾರಾ? ರೈತರ ಅನ್ನ ತಿಂದು ರೈತರಿಗೆ ದ್ರೋಹ ಮಾಡುತ್ತಿದ್ದಾರೆ' ಎಂದು ರೈತ ಮಹಿಳೆ ಮಂಜುಳಾ ಪುಜಾರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಡಿ. 10): ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಇಂದು ಮುಂದುವರೆದಿದೆ. ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
'ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಮುಳ್ಳು ಬೇಲಿ ಇಡೋದು, ಕಲ್ಲು ಬಂಡೆ ಇಡೋದು, ತಣ್ಣೀರು ಎರಚೋದು ಮಾಡ್ತಿದ್ದಾರೆ. ರೈತರೇನು ಉಗ್ರಗಾಮಿಗಳಾ? ಕಳ್ಳರಂತೆ ಕಾಣ್ತಾರಾ? ರೈತರ ಅನ್ನ ತಿಂದು ರೈತರಿಗೆ ದ್ರೋಹ ಮಾಡುತ್ತಿದ್ದಾರೆ' ಎಂದು ರೈತ ಮಹಿಳೆ ಮಂಜುಳಾ ಪುಜಾರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ನಮ್ಮ ಹೋರಾಟಕ್ಕೆ ಸಾಕಷ್ಟು ಸಂಘಟನೆಗಳು ಸಾಥ್ ನೀಡಿವೆ. ಇಂದು ವಿಧಾನ ಸೌಧ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ' ಎಂದು ಮಂಜುಳಾ ಪೂಜಾರಿ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ.