Asianet Suvarna News Asianet Suvarna News

ಶುಕ್ರವಾರ ಕರ್ನಾಟಕ ಬಂದ್‌ ಇಲ್ಲ; ಬೇರೆ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ರೈತ ಸಂಘಟನೆಗಳು

Sep 23, 2020, 10:46 AM IST
  • facebook-logo
  • twitter-logo
  • whatsapp-logo

ಬೆಂಗಳೂರು (ಸೆ. 23): ಶುಕ್ರವಾರ, ಸೆ. 23 ರಂದು ನಡೆಸಬೇಕೆಂದಿದ್ದ ಕರ್ನಾಟಕ ಬಂದ್‌ನಿಂದ ರೈತ ಸಂಘಟನೆಗಳು ಹಿಂದಕ್ಕೆ ಸರಿದಿವೆ. ಶುಕ್ರವಾರ ಬಂದ್ ಇರುವುದಿಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಪಡಿಸಿವೆ. ಹಳ್ಳಿ ಹಳ್ಳಿಗಳಲ್ಲೂ ಹೆದ್ದಾರಿಗಳು ಬಂದ್ ಆಗುತ್ತವೆ. ಹೆದ್ದಾರಿ ಬಳಿಕ ಜೈಲ್ ಭರೋ ಮಾಡಲು ನಿರ್ಧರಿಸಲಾಗಿದೆ. 

ಅನ್ನದಾತನಿಗೆ ಮೋಸ ಮಾಡಿಬಿಟ್ಟರಾ ಪ್ರಧಾನಿ ಮೋದಿ..?

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೆ. 25 ರಂದು ಕರ್ನಾಟಕ ಬಂದ್ ಮಾಡಲು ರೈತ ಸಂಘಟನೆಗಳು ನಿರ್ಧರಿಸಿದ್ದವು. ಆದರೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಗದೇ ಇದ್ದುದರಿಂದ ಬಂದ್‌ ವಾಪಸ್ ತೆಗೆದುಕೊಳ್ಳಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿರುತ್ತವೆ.