Asianet Suvarna News Asianet Suvarna News

ಟಾರ್ಗೆಟ್ ಬಿಜೆಪಿ ಕಚೇರಿ.. ಬ್ಲಾಸ್ಟ್ ಆಗಿದ್ದು ರಾಮೇಶ್ವರಂ ಕೆಫೆ..! NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಸತ್ಯ ಬಯಲು..!

ರಾಮಜನ್ಮಭೂಮಿ ಅಯೋಧೆಯಲ್ಲಿ ರಾಮ ಪಟ್ಟಾಭಿಷೇಕದ ದಿನ ರಕ್ತಪಿಪಾಸುಗಳ ಹಿಟ್ ಲಿಸ್ಟ್'ನಿಂದ ಬಚಾವ್ ಆಗಿತ್ತು ರಾಜ್ಯ ಬಿಜೆಪಿ ಕಚೇರಿ.. ಜಗನ್ನಾಥ ಭವನದಲ್ಲಿ ಮಿಸ್, ರಾಮೇಶ್ವರಂ ಕೆಫೆಯಲ್ಲಿ ಸಕ್ಸಸ್.. 

First Published Sep 11, 2024, 3:16 PM IST | Last Updated Sep 11, 2024, 3:16 PM IST

ಬೆಂಗಳೂರು(ಸೆ.11):  ಅತ್ತ ಅಯೋಧ್ಯೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ.. ಇತ್ತ ಬೆಂಗಳೂರಿನಲ್ಲಿ ರಕ್ತಪಿಪಾಸುಗಳ ಮಹಾ ಸಂಚು.. ರಾಜ್ಯ ಬಿಜೆಪಿ ಕಚೇರಿಯನ್ನೇ ಉಡಾಯಿಸಲು ಸಿದ್ಧವಾಗಿತ್ತು ಬೆಚ್ಚಿ ಬೀಳಿಸುವ ಷಡ್ಯಂತ್ರ.. ಅವತ್ತು ಅಲ್ಲಿ ರಕ್ತದೋಕುಳಿಯಾಡಲು ರೆಡಿಯಾಗಿತ್ತು ಖತರ್ನಾಕ್ ಪ್ಲಾನ್.. ಉಗ್ರರ ಹಿಟ್'ಲಿಸ್ಟ್'ನಿಂದ ಮಿಸ್ ಆಗಿದ್ದು ಹೇಗೆ ಜಗನ್ನಾಥ ಭವನ..? ಇಲ್ಲಿ ಮಿಸ್, ಅಲ್ಲಿ ಸಕ್ಸಸ್..  ಭಯೋತ್ಪಾದಕರ ಸಂಚಿಗೆ ಬಲಿಯಾಗಿದ್ದು ಹೇಗೆ ರಾಮೇಶ್ವರಂ ಕೆಫೆ..? ಎನ್ಐಎ ಚಾರ್ಜ್'ಶೀಟ್ ಬಿಚ್ಚಿಟ್ಟ ಮಹಾ ಸಂಚಿನ ಇಂಚಿಂಚೂ ಮಾಹಿತಿಯನ್ನು ಇವತ್ತಿನ ಈ ವಿಶೇಷ ಕಾರ್ಯಕ್ರಮದಲ್ಲಿ ನಿಮ್ಮ ಮುಂದಿಡ್ತೀವಿ ನೋಡಿ.

ರಕ್ತಪಿಪಾಸುಗಳ ಹಿಟ್ ಲಿಸ್ಟ್'ನಿಂದ ರಾಜ್ಯ ಬಿಜೆಪಿ ಕಚೇರಿ ಮಿಸ್, ರಾಮೇಶ್ವರಂ ಕೆಫೆಯಲ್ಲಿ ಪ್ಲಾನ್ ಸಕ್ಸಸ್.. ಶಾಕಿಂಗ್ ಸತ್ಯ ಹೊರ ಬರ್ತಾ ಇದ್ದಂತೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಸರಿ ಕಲಿಗಳ ರಣಾಕ್ರೋಶ.. ಮಹಾ ಸಂಚು ಬಯಲಾದ ಬೆನ್ನಲ್ಲೇ ಬಿಜೆಪಿ ನಾಯಕರು ಹೇಳಿದ್ದೇನು?.

ದರ್ಶನ್ ಪಾಲಿಗೆ 'ವಿಜಯ' ದಕ್ಕುತ್ತಾ? ತಾಯಿ ಮುಂದೆ ಜೈಲು ದಾಸನ ಮಡದಿಯ ಮನೋನಿವೇದನೆ!

ರಾಮಜನ್ಮಭೂಮಿ ಅಯೋಧೆಯಲ್ಲಿ ರಾಮ ಪಟ್ಟಾಭಿಷೇಕದ ದಿನ ರಕ್ತಪಿಪಾಸುಗಳ ಹಿಟ್ ಲಿಸ್ಟ್'ನಿಂದ ಬಚಾವ್ ಆಗಿತ್ತು ರಾಜ್ಯ ಬಿಜೆಪಿ ಕಚೇರಿ.. ಜಗನ್ನಾಥ ಭವನದಲ್ಲಿ ಮಿಸ್, ರಾಮೇಶ್ವರಂ ಕೆಫೆಯಲ್ಲಿ ಸಕ್ಸಸ್.. ಎನ್ಐಎ ಕೋಟೆಯಲ್ಲಿ ಕಿರಾತಕರು ಬಾಯ್ಬಿಟ್ಟ 

ಶಾಕಿಂಗ್ ಸತ್ಯ ಹೊರ ಬರ್ತಾ ಇದ್ದಂತೆ ಕೇಸರಿ ಕಲಿಗಳು ಕನಲಿ ನಿಂತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಾಕ್ರೋಶವನ್ನೇ ಹೊರ ಹಾಕಿದ್ದಾರೆ. ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ಉಗ್ರರು ಪ್ಲಾನ್ ಮಾಡಿದ್ರು ಅಂತ ಎನ್ಐಎ ಚಾರ್ಜ್'ಶೀಟ್ ಹೇಳ್ತಾ ಇದೆ. ಆದ್ರೆ ಇದು ಬಿಜೆಪಿಗರ ಕಟ್ಟುಕಥೆ ಅಂತಿದ್ದಾರೆ ಸಿದ್ದರಾಮಯ್ಯ ಸರ್ಕಾರದ ಆ ಮಂತ್ರಿ.. ಅಷ್ಟಕ್ಕೂ ಹೀಗಂದವರು ಯಾರು..? 

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್'ಗೂ ಮುಂಚೆ ರಾಜ್ಯ ಬಿಜೆಪಿ ಕಚೇರಿಯನ್ನೇ ಉಡಾಯಿಸಲು ಸಂಚು ಮಾಡಲಾಗಿತ್ತು ಅಂತ ಎನ್ಐಎ ಜಾರ್ಜ್'ಶೀಟ್ ಹೇಳ್ತಾ ಇದೆ. ಆದ್ರೆ ಇದೆಲ್ಲಾ ಶುದ್ಧ ಸುಳ್ಳು, ಇದು ಬಿಜೆಪಿಗರ ಕಟ್ಟುಕಥೆ ಅಂತಿದ್ದಾರೆ ಸಿದ್ದರಾಮಯ್ಯ ಸರ್ಕಾರದ ಆ ಮಂತ್ರಿ.

Video Top Stories