Hijab Row: ಹೈಕೋರ್ಟ್ ಆದೇಶ ಪಾಲಿಸಬೇಕು, ಹೊರಗಿನವರಿಂದಲೇ ವಿವಾದ ಹೆಚ್ಚಾಗುತ್ತಿದೆ: ಸಿಎಂ

ಹಿಜಾಬ್ (Hijab Row) ವಿಚಾರವಾಗಿ ಹೈಕೋರ್ಟ್ (High Court) ಆದೇಶವನ್ನು ಪಾಲಿಸಬೇಕು. ಹೊರಗಿನವರು ಮೂಗು ತೂರಿಸುವುದನ್ನು ಬಿಡಬೇಕು. ಹೊರಗಿನವರಿಂದಲೇ ವಿವಾದ ಹೆಚ್ಚಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. 

First Published Feb 19, 2022, 4:19 PM IST | Last Updated Feb 19, 2022, 4:19 PM IST

ಬೆಂಗಳೂರು (ಫೆ. 19): ಹಿಜಾಬ್ (Hijab Row) ವಿಚಾರವಾಗಿ ಹೈಕೋರ್ಟ್ (High Court) ಆದೇಶವನ್ನು ಪಾಲಿಸಬೇಕು. ಹೊರಗಿನವರು ಮೂಗು ತೂರಿಸುವುದನ್ನು ಬಿಡಬೇಕು. ಹೊರಗಿನವರಿಂದಲೇ ವಿವಾದ ಹೆಚ್ಚಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. 

ಹಿಜಾಬ್‌ ಧಾರಣೆ ಇಸ್ಲಾಂ ಧಾರ್ಮಿಕ ಆಚರಣೆಯ ಅಗತ್ಯ ಭಾಗವಲ್ಲ. ಜತೆಗೆ, ಹಿಜಾಬ್‌ಗೆ ನಿರ್ಬಂಧ ವಿಧಿಸುವುದರಿಂದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಪ್ರತಿಪಾದಿಸುವ ಭಾರತ ಸಂವಿಧಾನದ 25ನೇ ಪರಿಚ್ಛೇದ ಉಲ್ಲಂಘನೆಯೂ ಆಗುವುದಿಲ್ಲ. ಹೀಗಂತ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಳೆದಿದೆ. ಅಲ್ಲದೆ, ಶಬರಿಮಲೆ ಮತ್ತು ತ್ರಿವಳಿ ತಲಾಖ್‌ ಪ್ರಕರಣಗಳ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ಸಾಂವಿಧಾನಿಕ ನೈತಿಕತೆ ಮತ್ತು ವೈಯಕ್ತಿಕ ಘನತೆಯ ಪರೀಕ್ಷೆಯಲ್ಲಿ ಇನ್ನೂ ಹಿಜಾಬ್‌ ಪದ್ಧತಿ ಉತ್ತೀರ್ಣವಾಗಬೇಕು ಎಂದು ಹೈಕೋರ್ಟ್‌ ಮುಂದೆ ವಾದ ಮಂಡಿಸಿದೆ.

Video Top Stories