Asianet Suvarna News Asianet Suvarna News

ಪಿಎಸ್‌ಐ ಮಾತ್ರವಲ್ಲ PWD ಪರೀಕ್ಷೆಯಲ್ಲೂ ಅಕ್ರಮದ ಘಾಟು..!

*  PWD ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ
*  2021ರ ಡಿ. 13 ರಂದು PWD ನಡೆದಿದ್ದ ಪರೀಕ್ಷೆ 
*  ಅಕ್ರಮದ ಸಾಕ್ಷಾತ್‌ ವಿಡಿಯೋ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ 
 

ಬೆಂಗಳೂರು(ಏ.24):  ರಾಜ್ಯದಲ್ಲಿ ಪಿಎಸ್‌ಐ ಮಾತ್ರವಲ್ಲ ಲೋಕೋಪಯೋಗಿ ಇಲಾಖೆಯಲ್ಲೂ ಅಕ್ರಮ ನಡೆದಿದೆ ಅಂತ ಹೇಳಲಾಗುತ್ತಿದೆ. PWD ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. PWD ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಅಕ್ರಮವೆಸಗಲಾಗಿದೆ ಅಂತ ಹೇಳಲಾಗುತ್ತಿದೆ. 2021ರ ಡಿಸೆಂಬರ್‌ 13 ರಂದು PWD ಪರೀಕ್ಷೆ ನಡೆದಿತ್ತು. ಬ್ಲೂಟೂತ್‌ ಬಳಸಿ ಉತ್ತರ ನೀಡುತ್ತಿರುವ ವಿಡಿಯೋ ಬಯಲಾಗಿದೆ. ಒಂದೊಂದೇ ಅಕ್ರಮಗಳು ಇದೀಗ ಬಯಲಾಗುತ್ತಿವೆ. ಯಾವ ಪ್ರಶ್ನೆಗೆ ಯಾವ ಉತ್ತರ ಬರೆಯಬೇಕು? ಅಂತ ಒಳಗಿರುವ ಅಭ್ಯರ್ಥಿಗಳಿಗೆ ಉತ್ತರ ನೀಡುತ್ತಿತ್ತು ಈ ಜಾಲ ಅಂತ ಹೇಳಲಾಗುತ್ತಿದೆ. ಈ ಅಕ್ರಮದ ಸಾಕ್ಷಾತ್‌ ವಿಡಿಯೋ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾಗಿದೆ. 

ತಮಿಳುನಾಡು ಜಾತ್ರೆಯ ಕ್ರೇನ್‌ನಲ್ಲಿ ರಾರಾಜಿಸಿದ ಅಪ್ಪು, ವಿಶೇಷ ನಮನ..!

Video Top Stories