
ಈದ್ಗಾ ವಿವಾದ: 12 ರಂದು ಚಾಮರಾಜಪೇಟೆ ಬಂದ್, ಮೈದಾನ ಹೆಸರು ಬದಲಾಯಿಸಲು ನಾಗರಿಕರ ನಿರ್ಧಾರ!
ಚಾಮರಾಜಪೇಟೆ ಆಟದ ಮೈದಾನ ಸಾರ್ವಜನಿಕ ಮೈದಾನವಾಗಿ ಹಾಗೂ ಆಟದ ಮೈದಾನವಾಗಿಯೇ ಉಳಿಸಬೇಕೆಂದು ಒತ್ತಾಯಿಸಿ ‘ಚಾಮರಾಜಪೇಟೆ ನಾಗರಿಕರ ಒಕ್ಕೂಟ’ ಜುಲೈ12 ರಂದು ಚಾಮರಾಜಪೇಟೆಗೆ ಸೀಮಿತವಾಗಿ ಬಂದ್‌ಗೆ ಕರೆ ನೀಡಿದೆ.
ಬೆಂಗಳೂರು (ಜು. 04): ಚಾಮರಾಜಪೇಟೆ ಆಟದ ಮೈದಾನ ಸಾರ್ವಜನಿಕ ಮೈದಾನವಾಗಿ ಹಾಗೂ ಆಟದ ಮೈದಾನವಾಗಿಯೇ ಉಳಿಸಬೇಕೆಂದು ಒತ್ತಾಯಿಸಿ ‘ಚಾಮರಾಜಪೇಟೆ ನಾಗರಿಕರ ಒಕ್ಕೂಟ’ ಜುಲೈ12 ರಂದು ಚಾಮರಾಜಪೇಟೆಗೆ ಸೀಮಿತವಾಗಿ ಬಂದ್‌ಗೆ ಕರೆ ನೀಡಿದೆ.
ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ, ಮುಖ್ಯ ಅಧಿಕಾರಿ ವರ್ಗಾವಣೆ: ಆರಗ ಆದೇಶ
ಜುಲೈ 12ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಿರ್ಸಿ ಸರ್ಕಲ್‌ನಿಂದ ಈದ್ಗಾ ಮೈದಾನದವರೆಗೆ ಬೃಹತ್ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ. ಕ್ಷೇತ್ರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಪತ್ರ ನೀಡಲಾಗುವುದು. ಮನೆ ಮನೆಗೆ ತೆರಳಿ ಭಿತ್ತಿಪತ್ರವನ್ನ ನೀಡಿ, ಬಂದ್‌ನಲ್ಲಿ ಭಾಗಿಯಾಗುವಂತೆ ಕರೆ ನೀಡಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚಾಮರಾಜ ಪೇಟೆ ಆಟದ ಮೈದಾನ ಸಾರ್ವಜನಿಕರ ಮೈದಾನವಾಗಿ ಮತ್ತು ಮಕ್ಕಳು ಆಟಕ್ಕೆ ಬಳಕೆ ಆಗುವಂತೆ ಉಳಿಯಬೇಕು. ಮೈದಾನವನ್ನು ಕಬಳಿಸುವುದಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ