ಶಿವಮೊಗ್ಗದಲ್ಲಿ ED ದಾಳಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ್ ಗೌಡ ನಿವಾಸದ ಮೇಲೆ ದಾಳಿ

ಶಿವಮೊಗ್ಗದಲ್ಲಿ ಇ.ಡಿ. ದಾಳಿ ನಡೆದಿದೆ. ಡಿಸಿಸಿ ಬ್ಯಾಂಕ್ ಹಾಗೂ ಅದರ ಅಧ್ಯಕ್ಷರಾಗಿರುವ ಕಾಂಗ್ರೆಸ್‌ ಮುಖಂಡ ಮಂಜುನಾಥ್‌ ಗೌಡ ನಿವಾಸದ ಮೇಲೆ ದಾಳಿ ನಡೆಸಿದ 15 ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. 

Share this Video
  • FB
  • Linkdin
  • Whatsapp

ಶಿವಮೊಗ್ಗ (ಅ.05): ಶಿವಮೊಗ್ಗದಲ್ಲಿ ಇ.ಡಿ. ದಾಳಿ ನಡೆದಿದೆ. ಡಿಸಿಸಿ ಬ್ಯಾಂಕ್ ಹಾಗೂ ಅದರ ಅಧ್ಯಕ್ಷರಾಗಿರುವ ಕಾಂಗ್ರೆಸ್‌ ಮುಖಂಡ ಮಂಜುನಾಥ್‌ ಗೌಡ ನಿವಾಸದ ಮೇಲೆ ದಾಳಿ ನಡೆಸಿದ 15 ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಡಿಸಿಸಿ ಬ್ಯಾಂಕ್ ನಕಲಿ ಬಂಗಾರ ಅಡಮಾನ ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಕಲ್ಲುಕೊಪ್ಪ ಗ್ರಾಮದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಲಾಗಿದೆ. ಎರಡು ತಿಂಗಳ ಹಿಂದೆ ಅಡಮಾನ ಪ್ರಕರಣದ ಕುರಿತು ಡಿಸಿಸಿ ಬ್ಯಾಂಕ್ ಎಂಡಿಗೆ ಇಡಿ ಮಾಹಿತಿಯನ್ನು ಕೇಳಿತ್ತು. ಸುಮಾರು 15 ಅಧಿಕಾರಿಗಳಿರುವ ತಂಡದಿಂದ ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದ್ದು, ಮಂಜುನಾಥ ಗೌಡರ ಮನೆ ಕಚೇರಿಗಳಲ್ಲಿ ದಾಖಲೆಗಳಿಗಾಗಿ ಇಡಿ ಶೋಧ ನಡೆಸುತ್ತಿದೆ.

Related Video