Asianet Suvarna News Asianet Suvarna News

ಜಮೀರ್‌ ಮೇಲೆ 'ಆಕ್ರಮಣ': ಇ.ಡಿ. ದಾಳಿಯ ಹಿಂದಿನ ಕಾರಣ ಮತ್ತು ರಾಜಕಾರಣ

Aug 5, 2021, 11:31 PM IST

ಬೆಂಗಳೂರು (ಆ.05): ಬಹುಕೋಟಿ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ, ಪ್ರಭಾವಿ ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ಖಾನ್‌ಗೆ ಸೇರಿದ 6 ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಅರ್ಧ ಎಕರೆ ಜಮೀನಿನಲ್ಲಿರುವ ಜಮೀರ್‌ ಅಹಮದ್‌ ಅರಮನೆ , ಮನೆಯೊಳಗಿನ ದೃಶ್ಯ ನೋಡಿದವರು ಹೈರಾಣಾಗಿದ್ದಾರೆ.  ಇಷ್ಟೊಂದು ದುಡ್ಡು ಎಲ್ಲಿಂದ ಬಂತು? ಐಎಂಎ ಮೂಲಕ ಮುಸ್ಲಿಂ ಬಾಂಧವರ ದುಡ್ಡು ತಿಂದು ತೇಗಿದ್ರಾ ಈ ಮುಖಂಡರು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

 ಇದನ್ನೂ ನೋಡಿ: ಡಿಲೀಟ್ ಮಾಡಿಸಿದ್ದರೂ ಜಮೀರ್‌ಗೆ ಮುಳುವಾಯ್ತಾ ಕ್ಲೌಡ್ ಮಾಹಿತಿ.?

ಕಾಂಗ್ರೆಸ್‌ನೋರಿಗೆ ಜಮೀರ್ ಮೇಲಿನ ಇ.ಡಿ. ದಾಳಿ ರಾಜಕೀಯ ಪ್ರೇರಿತವಾಗಿ ಕಾಣುತ್ತಿದೆ. ಬಿಜೆಪಿ ನಾಯಕರು ಅದಕ್ಕೆ ತಿರುಗೇಟು ಕೂಡಾ ಕೊಟ್ಟಿದ್ದಾರೆ. ಮುಸ್ಲಿಮರಿಗೆ ಅನ್ಯಾಯ, ಬಡವರಿಗೆ ದೋಖಾ ಎಂದು ಯಾವಾಗಲೂ ಬೊಬ್ಬಿಡುವ  ರಾಜಕೀಯ ಮುಖಂಡರು ಇ.ಡಿ. ದಾಳಿಯನ್ನು ಖಂಡಿಸಿದ್ದಾರೆ .  ಅವರು ಮುಸ್ಲಿಮರ ಪರವೋ? ಬಡವರ ಪರವೋ? ಅಥವಾ ಜಮೀರ್ ಪರವೋ?  ಅವರು  ಯಾರ ಪರ? ಅವರ ನಿಲುವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Video Top Stories