Asianet Suvarna News Asianet Suvarna News

ಡಿಲೀಟ್ ಮಾಡಿಸಿದ್ದರೂ ಜಮೀರ್‌ಗೆ ಮುಳುವಾಯ್ತಾ ಕ್ಲೌಡ್ ಮಾಹಿತಿ.?

Aug 5, 2021, 5:11 PM IST

ಬೆಂಗಳೂರು (ಆ. 05): ಜಮೀರ್ ಅಹ್ಮದ್ ಖಾನ್‌ಗೆ ಸಂಬಂಧಿಸಿದ ನಿವಾಸ, ಕಚೇರಿ, ಟ್ರಾವೆಲ್ಸ್‌ಗಳ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. IMA ಹಗರಣ ಜಮೀರ್‌ಗೆ ಮುಳುವಾಗಿದೆ. ಜಮೀರ್ ಮಗಳಿಗೆ ಮನ್ಸೂರ್ ಅಲಿ ಖಾನ್ ಚಿನ್ನಾಭರಣಗಳನ್ನು ನೀಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ಜಮೀರ್ ಅಹ್ಮದ್‌ಗೆ ಇಡಿ ಶಾಕ್, ಆಸ್ತಿಪಾಸ್ತಿ ವಿವರ ನೋಡಿದ್ರೆ, ನೋಡಿದವರೇ ಶಾಕ್..!

ಜಮೀರ್ ಮತ್ತು ಮನ್ಸೂರು ನಡುವಿನ ಕೋಟ್ಯಂತರ ರೂ ವ್ಯವಹಾರ ಕ್ಲೌಡ್ ಮಾಹಿತಿ ರಿಕವರಿಯಲ್ಲಿ ಬಹಿರಂಗವಾಗಿದೆ. ಕ್ಲೌಡ್ ಮಾಹಿತಿ ರಿಕವರಿ ಸ್ವಲ್ಪ ವಿಳಂಬವಾಗಿದ್ದರಿಂದ ಇಷ್ಟು ದಿನ ಜಮೀರ್ ಅಹ್ಮದ್ ಬಚಾವಾಗಿದ್ದರು. ಕ್ಲೌಡ್ ಮಾಹಿತಿ ಆಧರಿಸಿ ಇಂದು ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.