ಡಿಕೆಶಿ ಮತ್ತೆ ನ್ಯಾಯಾಂಗ ಬಂಧನಕ್ಕೆ: ಜೈಲಿನಿಂದ ಆಚೆ ಬರಲು ಒಂದೇ ಹಾದಿ
ದೆಹಲಿಯ ಫ್ಲ್ಯಾಟ್ನಲ್ಲಿ ದಾಖಲೆ ಇಲ್ಲದ ಹಣ ಪತ್ತೆ ಹಿನ್ನೆಲೆಯಲ್ಲಿ ಇ.ಡಿ.ವಿಚಾರಣೆ ಎದುರಿಸುತ್ತ ಸದ್ಯ ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ಗೆ ಇಂದು (ಮಂಗಳವಾರ) ಕೂಡ ರಿಲೀಫ್ ಸಿಕ್ಕಿಲ್ಲ.
ನವದೆಹಲಿ, (ಅ.15): ದೆಹಲಿಯ ಫ್ಲ್ಯಾಟ್ನಲ್ಲಿ ದಾಖಲೆ ಇಲ್ಲದ ಹಣ ಪತ್ತೆ ಹಿನ್ನೆಲೆಯಲ್ಲಿ ಇ.ಡಿ.ವಿಚಾರಣೆ ಎದುರಿಸುತ್ತ ಸದ್ಯ ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ಗೆ ಇಂದು (ಮಂಗಳವಾರ) ಕೂಡ ರಿಲೀಫ್ ಸಿಕ್ಕಿಲ್ಲ.
ಇಂದು ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಇ.ಡಿ. ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ನ್ಯಾಯಾಧೀಶ ಅಜಯ್ಕುಮಾರ್ ಕುಹರ್ ಅವರು, ಡಿ.ಕೆ.ಶಿವಕುಮಾರ್ಗೆ ಮತ್ತೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್‌ವರೆಗೂ ಡಿಕೆಶಿಗೆ ಬೇಲ್ ಇಲ್ಲ! ಯಾಕೆ ಅಂತೀರಾ?
ಹಾಗಾಗಿ ಮುಂದಿನ ವಿಚಾರಣೆವರೆಗೂ ನ್ಯಾಯಾಂಗ ಬಂಧನದಲ್ಲಿ ಇರಬೇಕು. ದೆಹಲಿ ಹೈಕೋರ್ಟ್ ಜಾಮೀನು ನೀಡಿದರೆ ಮಾತ್ರ ಜೈಲಿನಿಂದ ಹೊರಬರಲಿದ್ದಾರೆ. ಇಲ್ಲಂದ್ರೆ ಡಿಕೆಶಿಗೆ ತಿಹಾರ್ ಜೈಲೇ ಗತಿಯಾಗಲಿದೆ.