ಆದಿತ್ಯ ಆಳ್ವಾ ರೆಸಾರ್ಟ್ ಮೇಲೆ ಸಿಸಿಬಿ ದಾಳಿ!
ಡ್ರಗ್ಸ್ ಮಾಫಿಯಾ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದ್ದು, ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ ಆರೋಪಿ ಎಂಬುವುದು ಉಲ್ಲೇಖನೀಯ.
ಡ್ರಗ್ಸ್ ಮಾಫಿಯಾ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದ್ದು, ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ ಆರೋಪಿ ಎಂಬುವುದು ಉಲ್ಲೇಖನೀಯ.
ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವಾರ ರೆಸಾರ್ಟ್‌ನಲ್ಲಿ ವೀಕೆಂಡ್ ಪಾರ್ಟಿಗಳ ನಡೆಯುತ್ತಿದ್ದವು. ನಟಿ ರಾಗಿಣಿ ಗೆಳಡಯ ರವಿಶಂಕರ್ ತಪ್ಪೊಪ್ಪಿಗೆಯಲ್ಲಿ ರೆಸಾರ್ಟ್ ಹೆಸರಿತ್ತೆನ್ನಲಾಗಿದೆ. ಅಲ್ಲದೇ ಪಾರ್ಟಿಗಳಿಗೆ ಆದಿತ್ಯ ತನ್ನ ರೆಸಾರ್ಟ್ ಬಾಡಿಗೆಗೂ ಕೊಡುತ್ತಿದ್ದ. ಅಲ್ಲದೇ ಈ ಪಾರ್ಟಿಗಳಲ್ಲಿ ಆದಿತ್ಯ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ.
ಹೆಬ್ಬಾಳದ ಆರು ಎಕರೆ ವಿಸ್ತೀರ್ಣದ ಹೌಸ್ ಆಫ್ ಲೈಫ್ ಎಂಬ ರೆಸಾರ್ಟ್‌ನಲ್ಲಿ ಮೋಜು ಮಸ್ತಿ ನಡೆಯುತ್ತಿತ್ತು. ರವಿಶಂಕರ್ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದರು.