ಉತ್ತರ ಕನ್ನಡ: 5 ಸಾವಿರಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್‌ ರದ್ದಾಗುವ ಲಿಸ್ಟ್‌ನಲ್ಲಿ

 ಉತ್ತರಕನ್ನಡ ಜಿಲ್ಲೆಯಲ್ಲಿ ವಿವಿಧ ವಿಭಾಗಗಳ ಅಡಿಯಲ್ಲಿ ಪಡಿತರ ಚೀಟಿಯ ರದ್ದು ಪ್ರಕ್ರಿಯೆ ಬಿರುಸುಗೊಂಡಿದೆ. 

First Published Oct 1, 2021, 5:15 PM IST | Last Updated Oct 1, 2021, 5:15 PM IST

ಉತ್ತರಕನ್ನಡ (ಅ. 01): ಜಿಲ್ಲೆಯಲ್ಲಿ ವಿವಿಧ ವಿಭಾಗಗಳ ಅಡಿಯಲ್ಲಿ ಪಡಿತರ ಚೀಟಿಯ ರದ್ದು ಪ್ರಕ್ರಿಯೆ ಬಿರುಸುಗೊಂಡಿದೆ. ಅರ್ಹರಿಗೆ ಸರಿಯಾಗಿ ಪಡಿತರ ಸೌಲಭ್ಯ ದೊರೆಯಬೇಕೆಂಬ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಈ ಕ್ರಮದಿಂದ ಜಿಲ್ಲೆಯಲ್ಲಿ ಈಗಾಗಲೇ ಐದು ಸಾವಿರಕ್ಕೂ ಮಿಕ್ಕಿ ಬಿಪಿಎಲ್ ಕಾರ್ಡ್ ರದ್ದಾಗುವ ಲಿಸ್ಟ್‌ನಲ್ಲಿದೆ. ಸರಕಾರಿ ಸಿಬ್ಬಂದಿ, ಆಸ್ತಿ-ಪಾಸ್ತಿ ಹೊಂದಿರುವವರು, ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ವೇತನ ಹೊಂದಿರುವವರು, ತೆರಿಗೆ ಪಾವತಿ ಮುಂತಾದ ಆಧಾರದಡಿ ಬಿಪಿಎಲ್ ಕಾರ್ಡ್ ರದ್ದು ಮಾಡಿ ಅವರನ್ನು ಎಪಿಎಲ್ ಕಾರ್ಡ್ ಲಿಸ್ಟ್‌ನಲ್ಲಿ ಸೇರಿಸಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಮ ಹೆಬ್ಬಾರ್, ಹೊಸ ಪಡಿತರ ಚೀಟಿಗಳು ಆಗಿಲ್ಲ. ಅನರ್ಹರಿಗೆ ಕಾರ್ಡ್‌ಗಳನ್ನು ಹಿಂತಿರುಗಿಸಲು ಅವಧಿ ನೀಡಲಾಗಿತ್ತು. ರಾಜ್ಯದಲ್ಲಿ ಸುಮಾರು 7 ಲಕ್ಷ ಪಡಿತರ ಕಾರ್ಡ್‌ಗಳನ್ನು ಹಸ್ತಾಂತರಿಸಿದ್ದಾರೆ ಎಂದಿದ್ದಾರೆ. ಈ ನಡುವೆ ಯಾವುದೇ ಅರ್ಹ ವ್ಯಕ್ತಿಗಳ ಪಡಿತರ ಕಾರ್ಡ್ ರದ್ದಾಗದಂತೆ ಹಾಗೂ ದೂರು ನೀಡಿದಲ್ಲಿ ಮತ್ತೆ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ.

Video Top Stories