ಧಾರ್ಮಿಕ ಕೇಂದ್ರಗಳಿಗೆ ಅನುಮತಿ; ಅಪಾಯದ ಬಗ್ಗೆ ಡಾ. ಮಂಜುನಾಥ್ ಹೇಳುವುದಿದು..!
ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಮಾ. 23 ರಿಂದ ಬಂದ್ ಅಗಿರುವ ದೇಗುಲ, ಮಸೀದಿ, ಚರ್ಚ್‌ನಂತಹ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ರೆಸ್ಟೋರೆಂಟ್‌ಗಳನ್ನು ಜೂ. 08 ರ ಸೋಮವಾರದಿಂದ ಪುನಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಬೆಂಗಳೂರು (ಜೂ. 05): ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಮಾ. 23 ರಿಂದ ಬಂದ್ ಅಗಿರುವ ದೇಗುಲ, ಮಸೀದಿ, ಚರ್ಚ್‌ನಂತಹ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ರೆಸ್ಟೋರೆಂಟ್‌ಗಳನ್ನು ಜೂ. 08 ರ ಸೋಮವಾರದಿಂದ ಪುನಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಲಾಕ್‌ಡೌನ್ ಸಡಿಲಿಕೆ: ಮಂದಿರ, ಮಸೀದಿ, ಚರ್ಚ್ ತೆರೆದ್ರೆ ಅಪಾಯ..!
ಧಾರ್ಮಿಕ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಸಾದ ವಿತರಿಸಬಾದರು, ತೀರ್ಥ ಪ್ರೋಕ್ಷಣೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೆ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದರ ಬಗ್ಗೆ ಸರ್ಕಾರದ ಮುಂದೆ ಟಾಸ್ಕ್ ಫೋರ್ಸ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ ಎಷ್ಟೇ ನಿಯಮಗಳನ್ನು ತಂದರೂ ಧಾರ್ಮಿಕ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಇದರ ಸಾಧಕ ಬಾಧಕಗಳ ಬಗ್ಗೆ ಖ್ಯಾತ ವೈದ್ಯರಾದ ಡಾ. ಸಿ ಎನ್ ಮಂಜುನಾಥ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!