ಗುಂಬಜ್‌ ಮೇಲೆ ಕಳಸ ಹಾಕಿದ್ದು ನಾನಾ, ನೀನಾ? ಪ್ರತಾಪ್‌ ಸಿಂಹ-ರಾಮದಾಸ್‌ ಶೀತಲ ಸಮರ!

ಸಾಕಷ್ಟು ವಿವಾದದಕ್ಕೆ ಕಾರಣವಾಗಿರುವ ಗುಂಬಜ್‌ ಮಾದರಿಯ ಮೈಸೂರು ಬಸ್‌ ಸ್ಟ್ಯಾಂಡ್‌ನ ವಿವಾದವೀಗ ಬಿಜೆಪಿ ನಾಯಕರ ನಡುವೆಯೇ ಶೀತಲ ಸಮರಕ್ಕೆ ಕಾರಣವಾಗಿದೆ. ಗುಂಬಜ್‌ ಮೇಲೆ 10 ದಿನಗಳ ಹಿಂದೆಯೇ ಕಳಸ ಅಳವಡಿಸಲಾಗಿತ್ತು ಎಂದು ರಾಮದಾಸ್‌ ಹೇಳಿದ್ದಾರೆ.
 

First Published Nov 16, 2022, 2:57 PM IST | Last Updated Nov 16, 2022, 2:57 PM IST

ಮೈಸೂರು (ನ.16): ಗುಂಬಜ್‌ ವಿವಾದ ಮೈಸೂರಿನಲ್ಲಿ ತಾರಕಕ್ಕೇರಿದೆ. ಈ ಕುರಿತಾಗಿ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ರಾಮ್‌ದಾಸ್‌ ನಡುವೆ ಶೀತಲ ಸಮರ ಆರಂಭವಾಗಿದೆ. ಶೆಲ್ಟರ್‌ ವಿನ್ಯಾಸದ ಮಾದರಿಯನ್ನು ರಾಮದಾಸ್‌ ಬಿಡುಗಡೆ ಮಾಡಿದ್ದಾರೆ. 10 ದಿನಗಳ ಹಿಂದೆಯೇ ಕಳಸವನ್ನು ಅಳವಡಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರತಾಪ್‌ ಸಿಂಹ ಹೇಳಿದ ಬಳಿಕ ಕಳಸ ಅಳವಡಿಸಿದ್ದಲ್ಲ. ಇದು ಶುದ್ದ ಸುಳ್ಳು ಎಂದು ರಾಮದಾಸ್‌ ಹೇಳಿದ್ದಾರೆ. ಆ ಮೂಲಕ ಗುಂಬಜ್‌ ವಿವಾದಕ್ಕೆ ಶಾಸಕ ರಾಮದಾಸ್‌ ಹೇಳಿಕೆ ಸ್ಫೋಟಕ ತಿರುವು ನೀಡಿದೆ. ಇದರೊಂದಿಗೆ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ರಾಮದಾಸ್‌ ನಡುವೆ ಶೀತಲ ಸಮರ ಆರಂಭವಾಗಿರುವ ಸ್ಪಷ್ಟ ಸುಳಿವು ಕೂಡ ಸಿಕ್ಕಿದೆ.

ಗುತ್ತಿಗೆದಾರ ಮುಸ್ಲಿಮ್, ಮಸೀದಿ ಮಾದರಿಯಲ್ಲಿ ನಿರ್ಮಾಣ ಎಂಬುದು ಸುಳ್ಳು: ರಾಮದಾಸ್ ಕಿಡಿ

ಪ್ರತಾಪ್‌ ಸಿಂಹ ಹೇಳಿದ ಬಳಿಕ ಕಳಸ ಅಳವಡಿಕೆ ಮಾಡಲಾಗಿದೆ ಎಂದು ವರದಿಯಾಗಿರುವುದು ಸುಳ್ಳು. 10 ದಿನಗಳ ಹಿಂದೆಯೇ ಈ ಕೆಲಸ ಮಾಡಲಾಗಿದೆ. ಜಾಲತಾಣದಲ್ಲಿ ವದಂತಿ ಹಬ್ಬಿಸುವ ಹುನ್ನಾರ ನಡೆದಿದೆ. ಮೈಸೂರಿನ ಮಹಾದೇವ್‌ ಎನ್ನುವವರು ಇದರ ಗುತ್ತಿಗೆ ಪಡೆದಿದ್ದರು.