ಗುತ್ತಿಗೆದಾರ ಮುಸ್ಲಿಮ್, ಮಸೀದಿ ಮಾದರಿಯಲ್ಲಿ ನಿರ್ಮಾಣ ಎಂಬುದು ಸುಳ್ಳು: ರಾಮದಾಸ್ ಕಿಡಿ

ಗುತ್ತಿಗೆದಾರ ಮುಸ್ಲಿಂ, ಮಸೀದಿ ಮಾದರಿಯಲ್ಲಿ ಕಾಮಗಾರಿ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ರಾಮದಾಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರಲ್ಲಿ ಗುಂಬಜ್‌ ಮಾದರಿ ಬಸ್‌ ನಿಲ್ದಾಣ ವಿವಾದ ತಾರಕಕ್ಕೇರಿದ್ದು, ಈ ಬಗ್ಗೆ ಶಾಸಕ ಎಸ್‌.ಎ. ರಾಮದಾಸ್‌ ಸ್ಪಷ್ಟನೆ ನೀಡಿದ್ದಾರೆ. ಬಸ್‌ ನಿಲ್ದಾಣದ ಶೆಲ್ಟರ್‌ ಮಾದರಿಯನ್ನು ಬಿಡುಗಡೆ ಮಾಡಿದ್ದಾರೆ. ಮೈಸೂರಿನ ಮಹತ್ವ ಸಾರುವ ದೃಷ್ಟಿಯಿಂದ ಈ ನಿರ್ಧಾರ ಎಂದು ಅವರು ಹೇಳಿದ್ದಾರೆ. ಹಾಗೆ, ಸಂಸದ ಪ್ರತಾಪ್‌ ಸಿಂಹ ಹೇಳಿಕೆ ಬಳಿಕ ವಿನ್ಯಾಸ ಬದಲಾವಣೆ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ. ವಿವಾದ ಸೃಷ್ಟಿಸಿದವರ ವಿರುದ್ಧ ಮೈಸೂರು ಕಮಿಷನರ್‌ಗೆ ರಾಮದಾಸ್‌ ದೂರು ನೀಡಿದ್ದಾರೆ. ಅಲ್ಲದೆ, ಗುತ್ತಿಗೆದಾರ ಮುಸ್ಲಿಂ, ಮಸೀದಿ ಮಾದರಿಯಲ್ಲಿ ಕಾಮಗಾರಿ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದೂ ಶಾಸಕ ರಾಮದಾಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video