ಪಿಎಸ್‌ಐ ನೇಮಕಾತಿ ಹಗರಣ: ಅಕ್ರಮದ ಬಗ್ಗೆ ಸಾಕ್ಷ್ಯ ನಾಶ ಮಾಡಿರುವ ದಿವ್ಯಾ ಹಾಗರಗಿ?

*  ಪುಣೆಯಲ್ಲೇ ಮೊಬೈಲ್‌ ಎಸೆದು ಬಂದ ದಿವ್ಯಾ ಹಾಗರಗಿ
*  18 ದಿನಗಳ ಬಳಿಕ ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿ ಬಂಧನ
*  ಮೊಬೈಲ್‌ ಎಸೆದಿರುವ ಬಗ್ಗೆ ನಿಖರವಾದ ಮಾಹಿತಿ ನೀಡದ ದಿವ್ಯಾ 

Share this Video
  • FB
  • Linkdin
  • Whatsapp

ಬೆಂಗಳೂರು(ಏ.30):  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಕಿಂಗ್‌ಪಿನ್‌, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ನಾಕ್ಷ್ಯ ನಾಶ ಮಾಡಿದ್ದಾರೆ ಅಂತ ತಿಳಿದು ಬಂದಿದೆ. ದಿವ್ಯಾ ಹಾಗರಗಿ ಪುಣೆಯಲ್ಲೇ ಮೊಬೈಲ್‌ ಎಸೆದು ಬಂದಿದ್ದಾರೆ. 18 ದಿನಗಳ ಬಳಿಕ ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿಯನ್ನ ಬಂಧಿಸಲಾಗಿತ್ತು. ಬಂಧನಕ್ಕೂ ಮುನ್ನ ದಿವ್ಯಾ ಮೊಬೈಲ್‌ ಮುಚ್ಚಿಟ್ಟು ಬಂದಿದ್ದಾರೆ. ಮಹಾರಾಷ್ಟ್ರದಲ್ಲೇ ಮೊಬೈಲ್‌ ಬಿಸಾಕಿದ್ದೇನೆ ಅಂತ ದಿವ್ಯಾ ಹಾಗರಗಿ ಹೇಳಿಕೆ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಮೊಬೈಲ್‌ ಎಸೆದಿರುವ ಬಗ್ಗೆ ದಿವ್ಯಾ ನಿಖರವಾದ ಮಾಹಿತಿ ಕೊಟ್ಟಿಲ್ಲ ಅಂತ ತಿಳಿದು ಬಂದಿದೆ. 

Acid Attack: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಆ್ಯಸಿಡ್‌ ಸಂತ್ರಸ್ತೆ ಕುಟುಂಬ

Related Video