Chikkaballapur : ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಒಪ್ಪಿಗೆ, ಬಿಜೆಪಿ ಮುಖಂಡರಿಂದ ಸಂಭ್ರಮಾಚರಣೆ

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಬೇರ್ಪಡಿಸಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ದೊರಕಿಸಿಕೊಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಯಶಸ್ವಿಯಾಗಿದ್ದಾರೆ. 

First Published Nov 10, 2021, 10:04 AM IST | Last Updated Nov 10, 2021, 10:16 AM IST

ಬೆಂಗಳೂರು (ನ. 10): ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು (Kochimul) ಬೇರ್ಪಡಿಸಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ದೊರಕಿಸಿಕೊಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಯಶಸ್ವಿಯಾಗಿದ್ದಾರೆ. 

ಕೋಚಿಮುಲ್ ಪ್ರತ್ಯೇಕಕ್ಕೆ ಸಂಪುಟ ಒಪ್ಪಿಗೆ, ರಮೇಶ್ ಕುಮಾರ್ ವಿರುದ್ಧದ ಸಮರದಲ್ಲಿ ಸುಧಾಕರ್‌ಗೆ ಜಯ

ಚಿಕ್ಕಬಳ್ಳಾಪುರದ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು, ಹಾಲು ಉತ್ಪಾದಕರು, ಮೇಗಾ ಡೇರಿ ಸಿಬ್ಬಂದಿ ಜಮಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್‌ ಹಾಗೂ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಬೃಹತ್‌ ಕಟೌಟ್‌ಗಳಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. ನಂದಿ ಕ್ರಾಸ್‌ ಸಮೀಪ ಇರುವ ಮೇಗಾ ಡೇರಿ ಮುಂದೆ ಸಂಭ್ರಮ ಮನೆ ಮಾಡಿತ್ತು. ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.