ತಾಲಿಬಾನ್ ವಶಕ್ಕೆ ಅಫ್ಘಾನ್, ಧಾರವಾಡದಲ್ಲಿ ವಿದ್ಯಾರ್ಥಿಗಳ ಕಣ್ಣೀರು.!
ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದೆ. ತಾಲಿಬಾನಿಯರ ಅಟ್ಟಹಾಸಕ್ಕೆ ನಾಗರೀಕರು ನಲುಗಿ ಹೋಗಿದ್ದಾರೆ. ಧಾರವಾಡ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ದೇಶದ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ.
ಬೆಂಗಳೂರು (ಆ. 17): ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದೆ. ತಾಲಿಬಾನಿಯರ ಅಟ್ಟಹಾಸಕ್ಕೆ ನಾಗರೀಕರು ನಲುಗಿ ಹೋಗಿದ್ದಾರೆ. ಧಾರವಾಡ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ದೇಶದ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. 15 ವಿದ್ಯಾರ್ಥಿಗಳಲ್ಲಿ 5 ಜನ ವಿದ್ಯಾರ್ಥಿಗಳು ಅಫ್ಘಾನಿಸ್ತಾನಕ್ಕೆ ವಾಪಸ್ಸಾಗಿದ್ದಾರೆ. 10 ವಿದ್ಯಾರ್ಥಿಗಳನ್ನು ಇಲ್ಲಿನ ಹಾಸ್ಟೆಲ್‌ನಲ್ಲಿಯೇ ಉಳಿದಿದ್ದಾರೆ. 'ನಮ್ಮ ಕುಟುಂಬದ ಜೊತೆ ಮಾತನಾಡಿದ್ದೇವೆ. ಅವರು ಸುರಕ್ಷಿತವಾಗಿದ್ದಾರೆ' ಎಂದಿದ್ದಾರೆ.
'ಅಫ್ಘಾನ್ ಸೈನಿಕರೇ ದೇಶ ಉಳಿಸಿಕೊಳ್ಳಲು ಹೋರಾಡಲಿಲ್ಲ, ನಮ್ಮ ಸೈನಿಕರೇಕೆ ಬಲಿಯಾಗಬೇಕು?'