'ಅಫ್ಘಾನ್ ಸೈನಿಕರೇ ದೇಶ ಉಳಿಸಿಕೊಳ್ಳಲು ಹೋರಾಡಲಿಲ್ಲ, ನಮ್ಮ ಸೈನಿಕರೇಕೆ ಬಲಿಯಾಗಬೇಕು?'
ಅಪ್ಘಾನಿಸ್ತಾನದಿಂದ ಅಮೆರಿಕ ಸೇನಾಪಡೆ ಮರಳಿದ ಬಳಿಕ ತಾಲಿಬಾನ್ ಅಟ್ಟಹಾಸ ಆರಂಭವಾಗಿದೆ. ಹೀಗಿರುವಾಗ ಇಡೀ ವಿಶ್ವವೇ ಅಮೆರಿಕಾ ನಿರ್ಧಾರವನ್ನು ಟೀಕಿಸುತ್ತಿದೆ. ಇಂದಿನ ಈ ದುಸ್ಥಿತಿಗೆ ಅಮೆರಿಕವೇ ಕಾರಣ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹೀಗಿರುವಾಗ ಯುಎಸ್ ಅಧ್ಯಕ್ಷ ಜೋ ಬೈಡೆನ್ ತಮ್ಮ ನಿರ್ಧಾರ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ
ಅಪ್ಘಾನಿಸ್ತಾನ(ಆ.17) ಅಪ್ಘಾನಿಸ್ತಾನದಿಂದ ಅಮೆರಿಕ ಸೇನಾಪಡೆ ಮರಳಿದ ಬಳಿಕ ತಾಲಿಬಾನ್ ಅಟ್ಟಹಾಸ ಆರಂಭವಾಗಿದೆ. ಹೀಗಿರುವಾಗ ಇಡೀ ವಿಶ್ವವೇ ಅಮೆರಿಕಾ ನಿರ್ಧಾರವನ್ನು ಟೀಕಿಸುತ್ತಿದೆ. ಇಂದಿನ ಈ ದುಸ್ಥಿತಿಗೆ ಅಮೆರಿಕವೇ ಕಾರಣ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹೀಗಿರುವಾಗ ಯುಎಸ್ ಅಧ್ಯಕ್ಷ ಜೋ ಬೈಡೆನ್ ತಮ್ಮ ನಿರ್ಧಾರ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ
ಹೌದು ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿದ ಬೈಡೆನ್, ಅಲ್ಲಿ ಶಾಶ್ವತವಾಗಿ ಅಮೆರಿಕ ಸೇನೆ ನಿಯೋಜಿಸಲು ಸಾಧ್ಯವಿಲ್ಲ. ಮುಂದಿನ 20 ವರ್ಷವಾದರೂ ತಾಲಿಬಾನ್ ದುರ್ಬಲಗೊಳಿಸಲು ಆಗುವುದಿಲ್ಲ. ಅಲ್ಲಿನ ಸೈನಿಕರೇ ತಮ್ಮ ದೇಶ ಉಳಿಸಿಕೊಳ್ಳಲು ಹೋರಾಡಲಿಲ್ಲ. ಹೀಗಿರುವಾಗ ನಾನೇಕೆ ಅಪ್ಘಾನ್ ನಂಬಿ ನಮ್ಮ ಸೈನಿಕರನ್ನು ಬಲಿ ಕೊಡಬೇಕು? ಅಲ್ಲದೇ ಅಪ್ಘಾನ್ ಅಧ್ಯಕ್ಷ ಘನಿ ಕೂಡಾ ನಂಬಿಕೆ ದ್ರೋಹ ಮಾಡಿದ್ದಾರೆ ಎಂದಿದ್ದಾರೆ.