ರಾಜ್ಯಸಭೆಗೆ ಧರ್ಮಾಧಿಕಾರಿ: ಮಂಜುನಾಥನ ಸನ್ನಿಧಿಯಿಂದ, ಪ್ರಜಾಪ್ರಭುತ್ವದ ದೇಗುಲದವರೆಗೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಓರ್ವ ಅಸಾಧಾರಣ ಸಾಧಕ. ಮಹೋನ್ನತ ಬಹುಮುಖಿ ಸಾಮಾಜಿಕ ಧಾರ್ಮಿಕ ನಾಯಕ. ಧಾರ್ಮಿಕ ಕ್ಷೇತ್ರವೊಂದರ ಸಮಗ್ರ ಸ್ವರೂಪವನ್ನು ಪುನರ್ ವ್ಯಾಖ್ಯಾನ ಮಾಡಿದ ಹೆಗ್ಗಡೆ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದೆ.

ಶಾಸನ ಸಭೆಯಲ್ಲಿ ಮುಂದುವರೆದ ಧರ್ಮಸ್ಥಳ ಧರ್ಮಾಧಿಕಾರಿ ಪರಂಪರೆ!
ಧರ್ಮಾಧಿಕಾರಿಯಾಗಿ ಕಳೆದ 54 ವರ್ಷಗಳಲ್ಲಿ ಧರ್ಮಸ್ಥಳವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಡೊಯ್ದ ಖ್ಯಾತಿ ಇವರದು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಮೂಲಕ 16 ಶಾಲೆಗಳನ್ನು, 6 ಪದವಿ ಪೂರ್ವ ಮತ್ತು ಪದವಿ ವಿದ್ಯಾಲಯಗಳನ್ನು, 6 ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು, 8 ತಾಂತ್ರಿಕ ವೃತ್ತಿಪರ ಕೇಂದ್ರಗಳನ್ನು, 5 ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯಗಳನ್ನು 8 ಬೋಧಕ ಆಸ್ಪತ್ರೆಗಳನ್ನು, ರುಡ್‌ಸೆಟ್ ಒಳಗೊಂಡಂತೆ 3 ವೃತ್ತಿ ಕೌಶಲ ತರಬೇತಿ ಸಂಸ್ಥೆಗಳನ್ನು, 2 ಸಂಶೋಧನಾ ಕೇಂದ್ರಗಳನ್ನು, 6 ವಿವಿಧ ವಿಷಯವನ್ನೊಳಗೊಂಡ ಧಾರವಾಡದಲ್ಲಿನ ಶ್ರೀ ಧ.ಮಂ.ವಿಶ್ವವಿದ್ಯಾಲಯವನ್ನು, ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿಗಳಲ್ಲಿ 8 ಶಿಕ್ಷಣ ಕೇಂದ್ರಗಳನ್ನು, ರಾಜ್ಯದಲ್ಲಿ ವಿವಿಧೆಡೆ 17 ಮಹಾವಿದ್ಯಾಲಯಗಳನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ಯಕ್ಷಗಾನ ಮಂಡಳಿ, ಮಂಜೂಷಾ ಮ್ಯೂಸಿಯಂ, ಹಳೆಯ ಕಾರುಗಳ ಸಂಗ್ರಹ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನಗಳು