
ಧರ್ಮಸ್ಥಳಕ್ಕೆ ಕರೆದುಕೊಂಡು ಬಂದವರ ಬುಡಕ್ಕೇ ಬೆಂಕಿ ಇಟ್ನಲ್ಲಾ ಅನಾಮಿಕ? ಬುರುಡೆ ಕೊಟ್ಟವರ 3 ಜನರ ಹೆಸರೇಳಿಬಿಟ್ಟ!
ಧರ್ಮಸ್ಥಳದಲ್ಲಿ ನಡೆದ ಉತ್ಖನನದ ಬಗ್ಗೆ SIT ವಿಚಾರಣೆ ನಡೆಸಿದ್ದು, ದೂರುದಾರನು 3 ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. ಈ ಬೆಳವಣಿಗೆ ವಿಧಾನಸಭೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ತನಿಖೆಯ ನಂತರದ ಹಂತಗಳು ಚರ್ಚಿಸಲ್ಪಟ್ಟಿವೆ. ಸುಳ್ಳು ಸುದ್ದಿ ಹರಡುವವರ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಯಾವನೋ ಒಬ್ಬ ಬಂದು ದೂರು ಕೊಟ್ಟ ಅಂತ ಸರ್ಕಾರ SIT ರಚನೆ ಮಾಡಿತ್ತು. ಆ SIT ಆತ ತೋರಿಸಿದ ಕಡೆಯಲ್ಲೆಲ್ಲಾ ಜೆಸಿಬಿಯನ್ನ ನುಗ್ಗಿಸಿತು. ಆದ್ರೆ ಸಿಕ್ಕಿದ್ದು ಒಂದಷ್ಟು ಮೂಳೆಗಳು ಬಿಟ್ಟರೆ ಆ ಅನಾಮಿಕನೇ ತಂದಿದ್ದ ಒಂದು ತಲೆಬುರುಡೆ. ಬಂದವನು ಯಾರು..? ಆತ ತಂದ ಬುರುಡೆ ಯಾರದ್ದು ಅಂತ ಒಂದೇ ಒಂದು ಪ್ರಶ್ನೆಯನ್ನೂ ಆತನಿಗೆ ಕೇಳಿರಲಿಲ್ಲ. ಆದ್ರೆ ಈಗ ಧರ್ಮಸ್ಥಳದ ಕಾಡಿನಲ್ಲೆಲ್ಲಾ ಉತ್ಕನನ ಮಾಡಿದ ಮೇಲೆ ಇವತ್ತು ಎಸ್‌ಐಟಿ ಅನಾಮಿಕನನ್ನ ಪ್ರಶ್ನೆ ಮಾಡಿತು.
ಆದರೆ, ಅನಾಮಿಕನಿಗೆ ಕೇಳಿದ ಮೊದಲ ಪ್ರಶ್ನೆಗೆ ಆತ ಕೊಟ್ಟ ಉತ್ತರ ಕೇಳಿ ಸ್ವತಃ ಎಸ್‌ಐಟಿ ಅಧಿಕಾರಿಗಳೆ ಥಂಡ ಹೊಡೆದಿದ್ದರು. ಕಾರಣ ಆತ 3 ಹೆಸರುಗಳನ್ನ ಹೆಳಿದ್ದನು. ಅಷ್ಟೇ ಅಲ್ಲ ಅವರು ಹೇಳಿದ್ದಂತೆ ಕೇಳಿದ್ದೇನೆ ಅಷ್ಟೇ ಅಂದಿದ್ದ. ಅಷ್ಟಕ್ಕೂ ಆತ ಹೆಳಿದ ಆ ಮೂವರು ಯಾರು.? ಈ ಅನಾಮಿಕನನ್ನ ತಂದು ಧರ್ಮಸ್ಥಳದ ವಿರುದ್ಧ ನಿಲ್ಲಿಸಿದ ಆ ಗ್ಯಾಂಗ್ ಯಾವುದು? ವಿಚಾರಣೆಯಲ್ಲಿ ಅನಾಮಿಕ ಕೊಟ್ಟ ಶಾಕಿಂಗ್ ಮಾಹಿತಿಗಳೇ ಇವತ್ತಿನ ಎಫ್.ಐ.ಆರ್.
ದೂರುದಾರನ ಮುಖವಾಡ ಕಳಚಿಬಿದ್ದಿದ್ದು, ಯಾರೋ ಸಂಚುಕೋರರ ಕೈಗೊಂಬೆಯಾಗಿ ಕೆಲಸ ಮಾಡಿದ್ದು ಬಯಲಾಗಿದೆ. ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರ ಹೆಣೆದ ಗ್ಯಾಂಗ್ ಈಗ ತಾವೇ ತೋಡಿದ ಗುಂಡಿಯೊಳಗೆ ಬಿದ್ದಿದೆ. ಇನ್ನೂ ಇದೇ ಬುರುಡೆ ಕೇಸ್ ವಿಧಾನಸಭೆಯಲ್ಲಿ ಧರ್ಮ ಯುದ್ದವನ್ನೇ ಸೃಷ್ಟಿಸಿಬಿಟ್ಟಿತ್ತು. ಹಾಗಾದರೆ ಇವತ್ತಿನ ಕಲಾಪದಲ್ಲಿ ಏನೆಲ್ಲಾ ಆಯ್ತು..? ಮಾಹಿತಿ ಇಲ್ಲಿದೆ.
ಇಷ್ಟು ದಿನ SIT ಕಾರ್ಯಚರಣೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಂತೆಕಂತೆಗಳೇ ಹರಿದಾಡಿದ್ದವು. ಅಷ್ಟು ಅಸ್ತಿ ಪಂಜರಗಳು ಸಿಕ್ಕಿದ್ವಂತೆ, ಇಷ್ಟು ಸಿಕ್ಕಿದ್ವಂತೆ ಅಂತ ಅದೊಂದು ವಿರೋಧಿ ಗ್ಯಾಂಗ್ ಬೇಕಾಬಿಟ್ಟಿ ವಿಡಿಯೋಗಳನ್ನ ಮಾಡಿತ್ತು. ಆದರೆ ಇವತ್ತು ಸರ್ಕಾರ ಕಲಾಪದಲ್ಲೇ ಅಧಿಕೃತವಾಗಿ ತನಿಖೆಯ ಮಾಹಿತಿ ಕೊಟ್ಟಿದೆ. ನಂತರ ತನಿಖೆಯ ಅಪ್ಡೇಟ್ಸ್ ಕೂಡ ಬಿಚ್ಚಿಟ್ಟಿದೆ. ಆದರೆ, ತನಿಖೆ ಬಗ್ಗೆ ಸುಳ್ಳು ಸುದ್ದಿ ಹರಡುವವರ ಕಥೆಯನ್ನ ಮಾತ್ರ ಹೇಳಲಿಲ್ಲ. ಇನ್ನೂ ಇದೇ ಕಾರ್ಯಚರಣೆ ಬಗ್ಗೆ ಕಲಾಪದಲ್ಲಿ ಇವತ್ತು ಧರ್ಮಯುದ್ಧವೇ ನಡೆದುಹೊಯ್ತು..
ಗೃಹ ಸಚಿವ ಪರಮೇಶ್ವರ ಹೇಳಿದಂತೆ ತಾತ್ಕಾಲಿಕವಾಗಿ ಗುಂಡಿ ಅಗೆಯೋದನ್ನೇನು ನಿಲ್ಲಿಸಲಾಗಿದೆ. ಆದರೆ, ಇಲ್ಲಿಗೆ ಎಲ್ಲಾ ಮುಗಿದಂತಲ್ಲ, ಇವಾಗಿನಿಂದಲೇ ನೋಡಿ ಅಸಲಿ ಆಟ ಶುರು. ಎಫ್.ಎಸ್.ಎಲ್ ರಿಪೋರ್ಟ್ ಬರ್ತಿದ್ದಂತೆ ನಿಜವಾದ ತನಿಖೆ ಆರಂಭವಾಗಲಿದೆ. ಅನಾಮಿಕನ ನಿಜ ಬಣ್ಣ ಬಯಲಾಗಲಿದೆ ಅಂತ ಹೇಳ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇವೆ.