ಕಳೇಬರ ಸಿಕ್ಕಾಗ ಪಾರ್ಟಿ, ಸಿಗದಿದ್ದಾಗ ಚಾಟಿ, ಚಿನ್ನಯ್ಯಗೆ ಬುರುಡೆ ಗ್ಯಾಂಗ್ ಕೊಟ್ಟ ಟಾರ್ಚರ್ ಬಹಿರಂಗ

6ನೇ ಪಾಯಿಂಟ್‌ನಿಂದ ಕಳೇಬರ ಸಿಕ್ಕಾಗ ಚಿನ್ನಯ್ಯನಿಗೆ ಪಾರ್ಟಿ ನೀಡಿದ್ರೆ, ಇನ್ನುಳಿದ ಕಡೆ ಯಾವುದೇ ಕಳೇಬರ ಸಿಗದಿದ್ದಾಗ ಚಾಟಿ ಏಟಿನಂತ ಟಾರ್ಚರ್ ಬಹಿರಂಗವಾಗಿದೆ. ಬುರುಡೆ ಗ್ಯಾಂಗ್ ಕೈಯಲ್ಲಿ ಸಿಕ್ಕ ಮಾಸ್ಕ್ ಮ್ಯಾನ್ ಚಿನ್ನಯ್ಯನ ಅನುಭವಿಸಿದ ನೋವು, ಎಸ್ಐಟಿ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

Share this Video
  • FB
  • Linkdin
  • Whatsapp

ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಿಟ್ಟ ಬುರುಡೆ ಕೇಸ್‌ನ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು ಹಿಂದೂಗಳ ನಂಬಿಕೆ ಘಾಸಿಗೊಳಿಸಲು ಮಾಡಿದ ಪ್ರಯತ್ನ ಈಗ ಜಗಜ್ಜಾಹೀರಾಗಿದೆ. ಗುಂಡಿ ತೋಡಿಸಿದವರೇ ಈಗ ಗುಂಡಿಗೆ ಬೀಳುವ ಟೈಮ್​ ಹತ್ತಿರ ಆಗ್ತಿದೆ. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್​ಐಟಿ ಜಾಲಾಡಿದೆ. ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದು.. ಆ ನಾಲ್ವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.

Related Video