
ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ: ಕಮ್ಯುನಿಸ್ಟ್ ಸಂಸದ, ಸೂತ್ರಧಾರಿನಾ? ಪಾತ್ರಧಾರಿನಾ?
ಧರ್ಮಸ್ಥಳ ಷಡ್ಯಂತ್ರದಲ್ಲಿ ಇನ್ನಷ್ಟು ಕೇರಳ ಮೂಲದ ಸಂಚುಗಳಿವೆ. ಹಾಗಿದ್ರೆ ಏನಾ ಪಿತೂರಿ.? ಯಾರ್ಯಾರ ಮೇಲೀಗ ಆರೋಪ, ಅನುಮಾನಗಳು ವ್ಯಕ್ತವಾಗ್ತಿವೆ. ಒಂದ್ಕಡೆ ಕೇರಳದ ಸಂಸದರೊಬ್ಬರಿಗೆ ಸಂಕಷ್ಟ ಶುರುವಾಗಿದೆ.
ಧರ್ಮಸ್ಥಳ ವಿರುದ್ಧ ಕೇರಳದಲ್ಲಿ ಷಡ್ಯಂತ್ರ. ಸಿಕ್ಕಿತು ಸಾಕ್ಷಿ.! ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ.! ಅಮಿತ್ ಶಾ ಅಂಗಳ ತಲುಪಿತ್ತು ಪಿತೂರಿ ಪತ್ರ.! ಕಮ್ಯುನಿಸ್ಟ್ ಸಂಸದ. ಸೂತ್ರಧಾರಿನಾ.? ಪಾತ್ರಧಾರಿನಾ.? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಬಡಾಯಿ ಬುರುಡೆ ಕೇರಳ ಫೈಲ್ಸ್. ಷಡ್ಯಂತ್ರವಲ್ಲ. ಮಹಾ ಷಡ್ಯಂತ್ರ. ಬರೀ ಸಂಚಲ್ಲ. ಮಹಾ ಸಂಚು. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಎಷ್ಟು ಸಾಧ್ಯವೋ ಅಷ್ಟು ಅಪಪ್ರಚಾರ ನಡೆಸೋಕೆ ನಡೆದಿತ್ತು ಒಂದು ಪಿತೂರಿ. ಇದ್ರ ವ್ಯಾಪ್ತಿ ಬಹಳ ದೊಡ್ಡದ್ದು. ಕೇರಳಕ್ಕೂ ಇದು ಹಬ್ಬಿದೆ. ಇದೀಗ ಅಲ್ಲಿನ ಸಂಸದರೊಬ್ಬರಿಗೂ ಬುರುಡೆ ಗ್ಯಾಂಗ್ಗೂ ನಂಟಿದ್ದ ವಿಚಾರ ಹೊರಬಿದ್ದಿದೆ. ಹಾಗಿದ್ರೆ, ಕೇರಳದ ಆ ಸಂಸದರಿಗೂ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರಕ್ಕೂ ಏನ್ ಸಂಬಂದ.? ಇದ್ರಲ್ಲಿ ಅವರ ಪಾತ್ರ ಎಷ್ಟಿತ್ತು.?
ಇಷ್ಟೇ ಅಲ್ಲಾ. ಧರ್ಮಸ್ಥಳ ಷಡ್ಯಂತ್ರದಲ್ಲಿ ಇನ್ನಷ್ಟು ಕೇರಳ ಮೂಲದ ಸಂಚುಗಳಿವೆ. ಹಾಗಿದ್ರೆ ಏನಾ ಪಿತೂರಿ.? ಯಾರ್ಯಾರ ಮೇಲೀಗ ಆರೋಪ, ಅನುಮಾನಗಳು ವ್ಯಕ್ತವಾಗ್ತಿವೆ. ಒಂದ್ಕಡೆ ಕೇರಳದ ಸಂಸದರೊಬ್ಬರಿಗೆ ಸಂಕಷ್ಟ ಶುರುವಾಗಿದ್ರೆ, ಇನ್ನೊಂದು ಕಡೆ ಕೇರಳದ ಯೂಟ್ಯೂಬರ್ ಒಬ್ಬನನ್ನ ವಿಚಾರಣೆಗೆ ಕರೆದಿದೆ ಎಸ್ಐಟಿ. ಹಾಗಿದ್ರೆ ಯಾರಾತ.? ಆತನ ಹಿನ್ನೆಲೆ ಏನು.? ಧರ್ಮಸ್ಥಳ ಪ್ರಕರಣದಲ್ಲಿ ಆತನ ಪಾತ್ರವೇನು.? ಧರ್ಮಸ್ಥಳದ ಹೆಸರು ಕೆಡಿಸಲು ಹಠಕ್ಕೆ ಬಿದ್ದಿದ್ದ ಬುರುಡೆ ಗ್ಯಾಂಗ್, ಕೊಡಗಿನಲ್ಲೂ ಸಂಚು ನಡೆಸಿರೋ ಸಂಗತಿ ಈಗ ಬಯಲಾಗಿದೆ. ಹಾಗಿದ್ರೆ ಏನೀ ಸಂಚು. ಬುರುಡೆ ಕಥೆ ಕಟ್ಟಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹೆಣೆಯೋದ್ರ ಜೊತೆಗೆ, ಈ ಬುರುಡೆ ಗ್ಯಾಂಗ್ ಮತ್ತೊಂದು ಪಿತೂರಿಯನ್ನ ಸಹ ಮಾಡಿತ್ತು. ಹಾಗಿದ್ರೆ ಏನಾ ಪಿತೂರಿ.? ಕೊಡಗಿನಲ್ಲಿ ಈ ಬುರುಡೆ ಗ್ಯಾಂಗ್ ಏನ್ ಮಾಡೋಕೆ ಹೊರಟಿತ್ತು.?