ಧರ್ಮಸ್ಥಳಕ್ಕೆ ಬರುತ್ತಾ ಮತ್ತೊಂದು ತನಿಖಾ ತಂಡ? ನೇತ್ರಾವತಿಯಿಂದ ರತ್ನಗಿರಿವರೆಗೆ, ಮುಂದೆಲ್ಲಿ?

ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಯಲ್ಲಿ ೧೩ನೇ ಸ್ಥಳ ಮಹತ್ವದ್ದಾಗಿದೆ. ವಕೀಲರ ನಿರೀಕ್ಷೆಯಂತೆ ಅಲ್ಲಿ ಅಸ್ಥಿಗಳು ಸಿಗದೆ ಹೋಗಿದ್ದು ತನಿಖೆಗೆ ಹೊಸ ತಿರುವು ನೀಡಿದೆ. ಭೂಗರ್ಭದಲ್ಲಿ ಹುಡುಕಾಟ ಮುಂದುವರೆದಿದೆ.

Share this Video
  • FB
  • Linkdin
  • Whatsapp

ಧರ್ಮಸ್ಥಳದ ಬುರುಡೆ ಪ್ರಕರಣ ಈಗ ಅತಿ ಮುಖ್ಯ ಘಟಕ್ಕೆ ಬಂದು ನಿಂತಿದೆ.. ಸತ್ಯಾಸತ್ಯತೆ ಬಯಲಾಗೋ ಹಂತದಲ್ಲಿದೆ ಎಸ್​ಐಟಿ ನಡೆಸ್ತಾ ಇರೋ ತನಿಖೆ.. ಆದ್ರೆ ಈ ತನಿಖೆಗೆ ಅತಿ ದೊಡ್ಡ ತಿರುವು ಸಿಕ್ಕಿದ್ದು, ಧರ್ಮಸ್ಥಳದ ದ್ವಾರ ದಾಟಿ ಬಾಹುಬಲಿ ಬೆಟ್ಟದ ಕಡೆ ಶಿಕಾರಿ ಹೊರಟಾಗ. ಇದೆಲ್ಲದರ ಮಧ್ಯೆ, ಅತಿ ಮುಖ್ಯ ಅನ್ನುಸ್ಕೊಳೋದು, ಸ್ಪಾಟ್ ನಂಬರ್ 13. ಇದು ಧರ್ಮಸ್ಥಳ ಪ್ರಕರಣದ ಮೇಜರ್, ಮೇಜರ್, ಮೇಜರರ್ ಪಾಯಿಂಟ್. ಯಾಕಂದ್ರೆ, ಮುಸುಕುಧಾರಿಯ ಮಾತು ಮತ್ತೆ ಮತ್ತೆ ಹುಸಿಹೋದಾಗಲೂ, ಆತನ ಪರನಿಂತಿದ್ದವರ ನಿರೀಕ್ಷೆ ಇದ್ದದ್ದು, ಇದೇ ಸ್ಪಾಟ್ ನಂಬರ್ 13ರ ಮೇಲೆ.

ವಕೀಲ ಮಂಜುನಾಥ್ ಅವರ ಪ್ರೆಸ್ ಸ್ಟೇಟ್​ಮೆಂಟ್ ಪ್ರಕಾರ, ಈ ಹದಿಮೂರನೇ ಪಾಯಿಂಟಲ್ಲೇ ಅತಿ ಹೆಚ್ಚು ಅಸ್ಥಿಗಳು ಸಿಗ್ಬೇಕಿತ್ತು. ಬಟ್ ಆ ನಿರೀಕ್ಷೆಯೂ ಸುಳ್ಳಾಗಿದೆ. 13ನೇ ಸ್ಪಾಟ್ ಅಲ್ಲಿ ಹೆಚ್ಚೂ ಕಮ್ಮಿ​ 10 ಅಡಿ ಆಳಕ್ಕೆ ಕೊರೆದರೂ ಏನೂ ಸಿಗ್ಲಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಜಾಗದಲ್ಲಿ ಶೋಧ ಶುರುವಾಯ್ತು. ಎರಡು ಹಿಟಾಚಿ, ಹಾಗೂ ಮಿನಿ ಅರ್ತ್ ಮೂವರ್ ಬಳಸ್ಕೊಂಡು, ಜಿಪಿಆರ್ ಸ್ಕ್ಯಾನಿಂಗ್ ಮಾಡಿ ಭೂಗರ್ಭ ರಹಸ್ಯ ಭೇದಿಸೋಕೆ ನೋಡಿದ್ರು. ಇದೇ ಕಾರಣಕ್ಕಾಗಿಯೇ ಆತ ಗುರ್ತಿಸಿದ್ದ ಪ್ರತಿಯೊಂದು ಪಾಯಿಂಟಲ್ಲೂ ಶೋಧ ಕಾರ್ಯ ನಡೀತು. ಈ ಸತ್ಯಾನ್ವೇಷಣೆಯಿಂದ ಅದ್ಯಾವ ಶಾಕಿಂಗ್ ಸಂಗತಿ ಹೊರಬರುತ್ತೋ ಗೊತ್ತಿಲ್ಲ.. ಆದ್ರೆ ಈ ತನಿಖೆಗೇ ಒಂದು ಟ್ವಿಸ್ಟ್ ಸಿಗಲಿದೆ ಅನ್ನೋ ವಾತಾವರಣ ಇದೆ.

Related Video