ದರ್ಶನ್ ಬಚಾವೋ ಆಂದೋಲನಕ್ಕೆ ಮತ್ತೆ ಚಾಲನೆ ಕೊಟ್ರಾ ಡಿಸಿಎಂ ಡಿಕೆ ಶಿವಕುಮಾರ್?
ಕೊಲೆಯ ಕೇಸ್‌ನಲ್ಲಿ ದರ್ಶನ್ ಬಚಾವ್ ಮಾಡೋಕೆ ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದಾರಾ ಎನ್ನುವ ಅನುಮಾನಗಳೆದ್ದಿವೆ. ಡಿಸಿಎಂ ಡಿಕೆಶಿ ಅವರನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಇಂದು ಭೇಟಿ ಮಾಡಿದ್ದೇ ಈ ಅನುಮಾನಕ್ಕೆ ಕಾರಣವಾಗಿದೆ.
ಬೆಂಗಳೂರು (ಜು.24): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ನನ್ನು ಬಚಾವ್ ಮಾಡಲು ಅವಿರತ ಪ್ರಯತ್ನ ನಡೆಯುತ್ತಿದೆ. ಪೊಲೀಸರು ಚಾರ್ಜ್‌ಶೀಟ್ ಹಾಕುವ ಸಮಯದಲ್ಲಿ ಮತ್ತೊಮ್ಮೆ ದರ್ಶನ್‌ರನ್ನು ಬಚಾವ್ ಮಾಡುವ ಪ್ರಯತ್ನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕುಟುಂಬ ಭೇಟಿಯಾಗಿದೆ.
ರೇಣುಕಾಸ್ವಾಮಿ ಕೊಲೆಯ ಕೇಸ್‌ನಲ್ಲಿ ನಟ ದರ್ಶನ್‌ರನ್ನ ಡಿಕೆಶಿ ಬಚಾವ್ ಮಾಡ್ತಾರಾ ಎನ್ನುವ ಕುತೂಹಲ ಎದ್ದಿದೆ. ರಾಮನಗರದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಅನ್ಯಾಯ ಆಗಿದ್ರೆ ನ್ಯಾಯ ಕೊಡಿಸ್ತೀನಿ ಎಂದು ಹೇಳಿದ್ದರು.
ಜೈಲಿನಲ್ಲಿ ದರ್ಶನ್ ಹಾಗೂ ವಿನೋದ್ ರಾಜ್ ಭೇಟಿ: ಬಾಚಿ ಅಪ್ಪಿಕೊಂಡು ಪರಸ್ಪರ ಕಣ್ಣೀರಿಟ್ಟರು!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಬಚಾವೋ ಆಂದೋಲನಕ್ಕೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಇಳಿದ ಹಾಗೆ ಕಂಡಿದೆ. ಡಿಕೆಶಿ ನಿವಾಸದಲ್ಲಿ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಒಂದೂವರೆ ತಾಸು ಚರ್ಚೆ ಮಾಡಿದ್ದಾರೆ. ಆದರೆ, ಡಿಕೆಶಿ ಮಾತ್ರ ಇದು 'ಆಕೆಯ ಮಗನ ಸ್ಕೂಲ್' ವಿಚಾರದ ಚರ್ಚೆ ಎಂದು ತೇಪೆ ಹಾಕಿದ್ದಾರೆ.