ಕೊರೊನಾ ಸಂಕಷ್ಟದ ಕಾಲದಲ್ಲಿ ಸ್ವಾಮೀಜಿಯಿಂದ ಹೊಸ ಕಾಯಕಲ್ಪ
ಕೊರೊನಾ ಸಂಕಷ್ಟ ಕಾಲದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೊಸ ಕಾಯಕಕ್ಕೆ ಕಾಯಕಲ್ಪ ಹಾಕಿದ್ದಾರೆ. ಕೋವಿಡ್ ಸೊಂಕು ತಡೆಗಟ್ಟಲು ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ ಕುರಿ ಪಾಲನೆಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮುಂದಾಗಿದ್ದಾರೆ.
ದಾವಣಗೆರೆ (ಜು. 29): ಕೊರೊನಾ ಸಂಕಷ್ಟ ಕಾಲದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೊಸ ಕಾಯಕಕ್ಕೆ ಕಾಯಕಲ್ಪ ಹಾಕಿದ್ದಾರೆ. ಕೋವಿಡ್ ಸೊಂಕು ತಡೆಗಟ್ಟಲು ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ ಕುರಿ ಪಾಲನೆಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮುಂದಾಗಿದ್ದಾರೆ.
ಕೊರೊನಾ ಕಾಲದಲ್ಲಿ ಭಕ್ತರು ಮಠಕ್ಕೆ ಬಾರದಂತೆ ವಿನಂತಿಸಿದ್ದರು. ಆದರೂ ನಿತ್ಯ ನೂರಾರು ಭಕ್ತರು ಆಗಮಿಸಿದ್ದಾರೆ. ಹೀಗಾಗಿ ಭಕ್ತರ ಹಾಗು ತಮ್ಮ ಸುರಕ್ಷಿತೆಗೆ ಆದ್ಯತೆ ನೀಡಿದ ಸ್ವಾಮೀಜಿ ಕನಕ ಗುರುಪೀಠಕ್ಕೆ ಸೇರಿದ ಐದು ನೂರಕ್ಕು ಹೆಚ್ಚು ಕುರಿಗಳ ಪಾಲನೆಗೆ ಮುಂದಾಗಿದ್ದಾರೆ.