ಬಳ್ಳಾರಿ ಜೈಲಿನಲ್ಲಿ ಗಣೇಶ ಹಬ್ಬ ಆಚರಿಸಿದರೂ ನಟ ದರ್ಶನ್‌ಗೆ ಸಿಗಲಿಲ್ಲ ದರ್ಶನ!

ಗಣೇಶ ಹಬ್ಬದ ದಿನ ನಟ ದರ್ಶನ್‌ಗೆ ಗಿಫ್ಟ್,  ರೇಣುಕಾಸ್ವಾಮಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಹೊಸ ಮಾಹಿತಿ ಬಯಲು, ರೇಣುಕಾಸ್ವಾಮಿಗೆ ಬಿರಿಯಾನಿ ತಿನ್ನಿಸಿದ್ದ ದರ್ಶನ್ ಗ್ಯಾಂಗ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಗಣೇಶ ಹಬ್ಬದ ದಿನ ಗಿಫ್ಟ್ ಸಿಕ್ಕಿದೆ. ಟಿವಿಗೆ ಬೇಡಿಕೆ ಇಟ್ಟಿದ್ದ ದರ್ಶನ್‌ಗೆ ಜೈಲು ಅಧಿಕಾರಿಗಳು ಗಣೇಶ ಹಬ್ಬ ದಿನ ಟಿವಿ ಹಾಕಿಕೊಟ್ಟಿದ್ದಾರೆ. ಆದರೆ ದರ್ಶನ್‌ಗೆ ಗಣೇಶ ದೇವರ ದರ್ಶನ ಮಾತ್ರ ಸಿಗಲಿಲ್ಲ. ಬಳ್ಳಾರಿ ಜೈಲಿನಲ್ಲಿ ಗಣೇಶ ಹಬ್ಬ ಆಚರಿಸಲಾಗಿದೆ. ಜೈಲಿನಲ್ಲಿ ಗಣೇಶ ಕೂರಿಸಲಾಗಿದೆ. ಆದರೆ ನಟ ದರ್ಶನ್‌ಗೆ ದರ್ಶನ ಭಾಗ್ಯ ಸಿಕ್ಕಿಲ್ಲ. ಇತ್ತ ರೇಣುಕಾಸ್ವಾಮಿ ಪ್ರಕರಣದಲ್ಲಿ ಹಲವು ಸ್ಫೋಟಕ ಮಾಹಿತಿಗಳೂ ಹೊರಬಂದಿದೆ. 

Related Video