Asianet Suvarna News Asianet Suvarna News

ವಿದ್ಯುತ್ ಅವಘಡದಿಂದ ಶಾಶ್ವತ ಅಂಗವೈಕಲ್ಯ, ವೇತನವಿಲ್ಲ, ಸೌಲಭ್ಯವಿಲ್ಲ, ಸಿಬ್ಬಂದಿಗೆ ಮೆಸ್ಕಾಂ ಅನ್ಯಾಯ

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಪುರಮದರ ದಾಸ್ ಎನ್ನುವವರು 1998 ರಲ್ಲಿ ತಾತ್ಕಾಲಿಕವಾಗಿ ಲೈನ್‌ಮ್ಯಾನ್ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಾರೆ. 2009 ರ ಹೊತ್ತಿಗೆ ಖಾಯಂ ಲೈನ್‌ಮ್ಯಾನ್ ಅಗಿ ನೇಮಕಗೊಳ್ಳುತ್ತಾರೆ. ಕರ್ತವ್ಯವೇ ದೇವರು ಎಂದು ಕಾರ್ಯ ನಿರ್ವಹಿಸುತ್ತಿದ್ದ ಪುರಂದರ್ ಅವರಿಗೆ 2016 ರಲ್ಲಿ ಅವಘಢವೊಂದು ಸಂಭವಿಸುತ್ತದೆ. 

ಮಂಗಳೂರು (ಜು. 21): ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಪುರಮದರ ದಾಸ್ ಎನ್ನುವವರು 1998 ರಲ್ಲಿ ತಾತ್ಕಾಲಿಕವಾಗಿ ಲೈನ್‌ಮ್ಯಾನ್ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಾರೆ. 2009 ರ ಹೊತ್ತಿಗೆ ಖಾಯಂ ಲೈನ್‌ಮ್ಯಾನ್ ಅಗಿ ನೇಮಕಗೊಳ್ಳುತ್ತಾರೆ. ಕರ್ತವ್ಯವೇ ದೇವರು ಎಂದು ಕಾರ್ಯ ನಿರ್ವಹಿಸುತ್ತಿದ್ದ ಪುರಂದರ್ ಅವರಿಗೆ 2016 ರಲ್ಲಿ ಅವಘಢವೊಂದು ಸಂಭವಿಸುತ್ತದೆ.

ಲೈನ್‌ಗೆ ತಾಕಿದ್ದ ಗೆಲ್ಲು ತಪ್ಪಿಸಲು ಹೋದಾಗ ಆಯತಪ್ಪಿ ಕೆಳಗೆ ಬೀಳುತ್ತಾರೆ. ಆಗ ಸೊಂಟದ ಕೆಳಭಾಗದ ಸ್ವಾಧೀನ ಕಳೆದುಕೊಳ್ಳುತ್ತಾರೆ. ಇಡೀ ಮನೆಯ ಆಧಾರ ಸ್ತಂಭವಾಗಿದ್ದ ಪುರಂದರ್‌ ದಾಸ್ ಅವರ ಈ ಸ್ಥಿತಿ ಮನೆಯವರನ್ನು ಶೋಚನೀಯವಾಗಿಸಿದೆ. ಇವರ ನರವಿಗೆ ನಿಲ್ಲಬೇಕಾದ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ಇವರ ವೇತನ, ಸೌಲಭ್ಯ ಎಲ್ಲವನ್ನೂ ತಡೆ ಹಿಡಿದಿದೆ. ಇದರಿಂದ ಪುರಂದರ್ ಅವರ ಸ್ಥಿತಿ ನರಕ ಸದೃಶವಾಗಿದೆ. 

BIG 3:ಬಳ್ಳಾರಿಯ ಮದಿರೆ ಗ್ರಾಮಸ್ಥರಿಗೆ ಕೊನೆಗೂ ಸಿಕ್ತು ಸ್ಮಶಾನಕ್ಕಾಗಿ ಜಾಗ!

 

Video Top Stories