BIG 3: ಬಳ್ಳಾರಿಯ ಮದಿರೆ ಗ್ರಾಮಸ್ಥರಿಗೆ ಕೊನೆಗೂ ಸಿಕ್ತು ಸ್ಮಶಾನಕ್ಕಾಗಿ ಜಾಗ!
ಬಳ್ಳಾರಿಯ ಕುರುಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ಯಾರಾದರೂ ಸತ್ತರೆ ಹೂಳೋದಕ್ಕೆ ಜಾಗವಿಲ್ಲದೇ ಪರದಾಡುತ್ತಿದ್ದರು. ಕಳೆದ 15 ವರ್ಷಗಳಿಂದ ಸ್ಮಶಾನಕ್ಕೆ ಜಾಗವಿಲ್ಲದೇ ಜನ ಪರದಾಡುತ್ತಿದ್ದರು. ಊರಿನಲ್ಲಿ ಸ್ಮಶಾನ ಇಲ್ಲದ ಕಾರಣ ಹಳ್ಳ ದಾಟಿ ಎಲ್ಲಿ ಬೇಕೆಂದರಲ್ಲಿ ಹೂಳುತ್ತಿದ್ದರು.
ಬಳ್ಳಾರಿ (ಜು. 21): ಇಲ್ಲಿನ ಕುರುಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ಯಾರಾದರೂ ಸತ್ತರೆ ಹೂಳೋದಕ್ಕೆ ಜಾಗವಿಲ್ಲದೇ ಪರದಾಡುತ್ತಿದ್ದರು. ಕಳೆದ 15 ವರ್ಷಗಳಿಂದ ಸ್ಮಶಾನಕ್ಕೆ ಜಾಗವಿಲ್ಲದೇ ಜನ ಪರದಾಡುತ್ತಿದ್ದರು. ಊರಿನಲ್ಲಿ ಸ್ಮಶಾನ ಇಲ್ಲದ ಕಾರಣ ಹಳ್ಳ ದಾಟಿ ಎಲ್ಲಿ ಬೇಕೆಂದರಲ್ಲಿ ಹೂಳುತ್ತಿದ್ದರು.
BIG 3: ರಸ್ತೆಗಳಿಲ್ಲ, ಡೋಲಿಯೇ ಆಂಬುಲೆನ್ಸ್, ನೋ ನೆಟ್‌ವರ್ಕ್, ಚಾಮರಾಜನಗರದ ಹಳ್ಳಿಗಳ ವ್ಯಥೆ
ಮಳೆಗಾಲದಲ್ಲಂತೂ ಇವರ ಪಾಡು ಯಾರಿಗೂ ಬೇಡ. ನಮಗೆ ಸ್ಮಶಾನಕ್ಕಾಗಿ ಜಾಗ ಕೊಡಿ ಸ್ವಾಮಿ ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿ, ಸಂಬಂಧಪಟ್ಟವರಿಗೆ ಕ್ಲಾಸ್ ತೆಗೆದುಕೊಂಡಿತು. ಈಗ ಸ್ಮಶಾನಕ್ಕಾಗಿ ೨ ಎಕರೆ ಜಾಗ ಮೀಸಲಿಡಲಾಗಿದೆ.