RSS ವಿರುದ್ಧದ ಸಿದ್ದರಾಮಯ್ಯ ಪತ್ರಕ್ಕೆ ಸಚಿವ ಸಿ.ಟಿ. ರವಿ ಕೆಂಡ
ನಾನು ಸಂಘದ ಸ್ವಯಂ ಸೇವಕ, ಹೀಗಾಗಿಯೇ ಸಚಿವನಾಗಿದ್ದೇನೆ| ಮೋದಿ ಸಂಘದ ಸ್ವಯಂ ಸೇವಕರಾಗಿದ್ದಾರೆ, ಹೀಗಾಗಿಯೇ ಪ್ರಧಾನಮಂತ್ರಿ ಆಗಿದ್ದಾರೆ| ಸಂಘ ಎಂದಿಗೂ ಹತ್ಯೆಯನ್ನ ಬೆಂಬಲಿಸಲ್ಲ, ಹತ್ಯೆ ಮಾಡಲ್ಲ| ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸಿ.ಟಿ. ರವಿ|
ಬೆಂಗಳೂರು(ಆ.22): ನಾನು ಸಂಘದ ಸ್ವಯಂ ಸೇವಕ, ಹೀಗಾಗಿಯೇ ಸಚಿವನಾಗಿದ್ದೇನೆ, ನರೇಂದ್ರ ಮೋದಿ ಅವರು ಸಂಘದ ಸ್ವಯಂ ಸೇವಕರಾಗಿದ್ದಾರೆ, ಹೀಗಾಗಿಯೇ ಪ್ರಧಾನಮಂತ್ರಿ ಆಗಿದ್ದಾರೆ. ಸಂಘ ಎಂದಿಗೂ ಹತ್ಯೆಯನ್ನ ಬೆಂಬಲಿಸಲ್ಲ, ಹತ್ಯೆ ಮಾಡಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸಿ.ಟಿ. ರವಿ ಹರಿಹಾಯ್ದಿದ್ದಾರೆ.
ಡಿಕೆ ಶಿವಕುಮಾರ್ ಫೋನ್ ಟ್ಯಾಪ್ ಆರೋಪಕ್ಕೆ ಸಚಿವ ಅಶೋಕ್ ತಿರುಗೇಟು..!
ಒಂದೇ ಸುಳ್ಳನ್ನು ಎಷ್ಟು ಬಾರಿ ಜನರ ಮುಂದೆ ಹೇಳುತ್ತೀರಿ, ಸಂಘವನ್ನ ಎಷ್ಟು ಹತ್ತಿರದಿಂದ ನೋಡಿದ್ದೀರಿ ನೀವು ಎಂದು ಹೇಳುವ ಮೂಲಕ ಆರ್‌ಎಸ್‌ಎಸ್ ವಿರುದ್ಧದ ಸಿದ್ದರಾಮಯ್ಯ ಪತ್ರಕ್ಕೆ ಸಚಿವ ಸಿ.ಟಿ. ರವಿ ಕೆಂಡಕಾರಿದ್ದಾರೆ.