ಬಿಜೆಪಿ ಸೇರಲು ವಿನಯ್ ಕುಲಕರ್ಣಿ ಸರ್ಕಸ್; ಸಿಪಿ ಯೋಗೇಶ್ವರ್ ಸಾಥ್

ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಕಮಲ ಪಾಳಯ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಸಿಪಿ ಯೋಗೇಶ್ವರ್ ವಿನಯ್ ಕುಲಕರ್ಣಿಗೆ ಬೆಂಬಲ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 06): ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಕಮಲ ಪಾಳಯ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿ ಮುಖಂಡರ ಜೊತೆ ಇಬ್ಬರು ಮಠಾಧೀಶರು ಮಾತನಾಡಿದ್ದಾರೆ. ಆದರೆ ಬಿಜೆಪಿ ಕಡೆಯಿಂದ ಸರಿಯಾದ ರೆಸ್ಪಾನ್ಸ್ ಬಂದಿಲ್ಲ. ಅರ್‌ಎಸ್‌ಎಸ್‌ ಮುಖಂಡರ ಬಳಿ ವಿನಯ್ ಕುಲರ್ಣಿಯನ್ನು ಕಳುಹಿಸಲಾಯಿತು. ಅಲ್ಲಿಂದಲೂ ರೆಸ್ಪಾನ್ಸ್ ಬಂದಿಲ್ಲ. ಹಾಗಾಗಿ ವಿನಯ್ ಕುಲಕರ್ಣಿಗೆ ನಡುಕ ಶುರುವಾಗಿದೆ. 

ಯೋಗೇಶ್ ಗೌಡ ಕೊಲೆ ಆರೋಪಿ ವಿನಯ್ ಕುಲಕರ್ಣಿ ಬಿಜೆಪಿ ಸೇರಲು ಸಿದ್ಧತೆ?

ಸಿಪಿ ಯೋಗೇಶ್ವರ್ ವಿನಯ್ ಕುಲಕರ್ಣಿಗೆ ಬೆಂಬಲ ನೀಡಿದ್ದಾರೆ. ಪ್ರಮುಖ ನಾಯಕರನ್ನು ಭೇಟಿ ಮಾಡಲು ದೆಹಲಿ ಹಾಗೂ ನಾಗ್ಪುರಕ್ಕೂ ಕರೆದೊಯ್ದಿದ್ದಾರೆ. ಸಿಪಿ ಯೋಗೇಶ್ವರ್ ಓಡಾಟಕ್ಕೆ ಬಿಜೆಪಿಯಲ್ಲಿಯೇ ಅಸಮಾಧಾನ ಶುರುವಾಗಿದೆ. ಅವರ ಪ್ರಯತ್ನಕ್ಕೆ ಯಾರೂ ಸೊಪ್ಪು ಹಾಕುತ್ತಿಲ್ಲ. 

Related Video