ಕೊರೋನಾ ಲಸಿಕೆಯ ಪ್ರಯೋಗಕ್ಕೆ ಒಳಗಾದ ಮೈಸೂರಿನ ವೈದ್ಯೆ, ಸುವರ್ಣ ನ್ಯೂಸ್ ಜತೆ ಮಾತು..!
ಮೈಸೂರಿನ ವೈದ್ಯರೊಬ್ಬರು ಸ್ವತಃ ಕೊರೋನಾ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅವರೇ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದಾರೆ.
ಬೆಂಗಳೂರು, (ಅ.27): ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೋನಾ ರೊಗಕ್ಕೆ 2021ರ ಜನವರಿಯಲ್ಲಿ ಲಸಿಕೆ ಸಿಗುವ ಸಂಭವವಿದೆ ಎಂಬ ಆಶಾಭಾವನೆ ಸರ್ಕಾರದಿಂದ ವ್ಯಕ್ತವಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಹೊಸ ವರ್ಷದ ಪ್ರಾರಂಭದಲ್ಲಿ ಕೊರೋನಾ ಮಾರಿಗೆ ಲಸಿಕೆ ಸಿಗುವ ನಿರೀಕ್ಷೆಯಿದ್ದು, 2 ಮತ್ತು 3ನೇ ಹಂತದಲ್ಲಿ ನಡೆಯುವ ಪ್ರಯೋಗಗಳ ಮೇಲೆ ಅವಲಂಬಿತವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಅಂತೂ ಇಂತೂ ಬರಲಿದೆ ಲಸಿಕೆ; 2021 ರ ಆರಂಭದಲ್ಲಿ ಸಿಗಲಿದೆ
ಮತ್ತೊಂದೆಡೆ ಮೈಸೂರಿನ ವೈದ್ಯರೊಬ್ಬರು ಸ್ವತಃ ಕೊರೋನಾ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅವರೇ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎನ್ನುವುದನ್ನ ಕೇಳಿ,