ಅಂತೂ ಇಂತೂ ಬರಲಿದೆ ಲಸಿಕೆ; 2021 ರ ಆರಂಭದಲ್ಲಿ ಸಿಗಲಿದೆ
2021 ರ ಆರಂಭದಲ್ಲಿಯೇ ಕೊರೊನಾ ಲಸಿಕೆ ಸಿಗಲಿದೆ. ಆಕ್ಸ್‌ಫರ್ಡ್- ಆಸ್ಟ್ರಾಜನಿಕ್ ಸಂಸ್ಥೆ ಜೊತೆ ರಾಜ್ಉ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಲಿದೆ ಎಂದು ಡಾ. ಸುಧಾಕರ್ ಸಭೆ ಬಳಿಕ ಹೇಳಿದ್ದಾರೆ.
ಬೆಂಗಳೂರು (ಅ. 27): ಕೋವಿಡ್ ಲಸಿಕೆ ಕುರಿತು ಇಂದು ಆರೋಗ್ಯ ಸಚಿವ ಡಾ. ಸುಧಾಕರ್ ಮಹತ್ವದ ಸಭೆ ನಡೆಸಿದ್ದಾರೆ.
2021 ರ ಆರಂಭದಲ್ಲಿಯೇ ಕೊರೊನಾ ಲಸಿಕೆ ಸಿಗಲಿದೆ. ಆಕ್ಸ್‌ಫರ್ಡ್- ಆಸ್ಟ್ರಾಜನಿಕ್ ಸಂಸ್ಥೆ ಜೊತೆ ರಾಜ್ಉ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಲಿದೆ. ಸಹಭಾಗಿತ್ವದಲ್ಲಿ ಲಸಿಕೆ ಸಿಗಲಿದೆ. ಮೈಸೂರಿನ ಜೆಎಸ್‌ಎಲ್ ಸಂಸ್ಥೆಯ ಜೊತೆಯೂ ಒಂದು ಬಾರಿ ಟ್ರಯಲ್ ನಡೆದಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ ಎಂದು ಡಾ. ಸುಧಾಕರ್ ಸಭೆ ಬಳಿಕ ಹೇಳಿದ್ದಾರೆ.
ಕೊರೊನಾಗೆ ವ್ಯಾಕ್ಸಿನ್ ರೆಡಿ; ಮಹಾಮಾರಿಯಿಂದ ಸದ್ಯದಲ್ಲೇ ಸಿಗಲಿದೆ ಮುಕ್ತಿ?
ಮೊದಲ ಹಂತದಲ್ಲಿ 100 ಕೋಟಿ ಜನರಿಗೆ ಲಸಿಕೆ ಕೊಡುವ ಸಾಮರ್ಥ್ಯವಿದೆ. ಭಾರತದಲ್ಲಿ 1600 ಜನರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. 2 ಹಾಗೂ 3 ನೇ ಹಂತದ ಪ್ರಯೋಗ ನಡೆಯುತ್ತಿದೆ ಎಂದು ಹೇಳಿದ್ದಾರೆ.