Omicron Threat: ಮಾಧ್ಯಮಗಳು ಲಾಕ್‌ಡೌನ್ ನಂತ ಕಠಿಣ ಪದ ಬಳಸೋದು ಬೇಡ: ಡಾ. ಸುಧಾಕರ್

ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹೆಚ್ಚಾಗುತ್ತಿದ್ದು, ಇಂದು ಸಿಎಂ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮಾಧ್ಯಮ ಮಿತ್ರರು ಲಾಕ್‌ಡೌನ್ ಅಂತ ಕಠಿಣ ಪದ ಉಪಯೋಗಿಸುವುದು ಬೇಡ' ಎಂದು ಡಾ. ಸುಧಾಕರ್ ಹೇಳಿದರು. 

First Published Jan 4, 2022, 1:14 PM IST | Last Updated Jan 4, 2022, 1:24 PM IST

ಬೆಂಗಳೂರು(ಜ. 04): ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 15ರಿಂದ 18 ವರ್ಷದೊಳಗಿನವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತಿದೆ. ಮೊದಲ ದಿನವಾದ ಸೋಮವಾರ 29,425 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ.47ರಷ್ಟುಗುರಿ ಸಾಧಿಸಿದಂತಾಗಿದೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

Omicron Variant: ಶೇ. 70 ರಷ್ಟು ವೇಗವಾಗಿ ಹರಡುತ್ತೆ, ವ್ಯಾಕ್ಸಿನ್ ತಗೋಳಿ, ಶ್ವಾಸಕೋಶ ರಕ್ಷಿಸಿಕೊಳ್ಳಿ

ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹೆಚ್ಚಾಗುತ್ತಿದ್ದು, ಇಂದು ಸಿಎಂ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮಾಧ್ಯಮ ಮಿತ್ರರು ಲಾಕ್‌ಡೌನ್ ಅಂತ ಕಠಿಣ ಪದ ಉಪಯೋಗಿಸುವುದು ಬೇಡ. ಈಗ ತಾನೆ ಜನಸಾಮಾನ್ಯರು ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಮತ್ತೆ ಲಾಕ್‌ಡೌನ್ ಹೇರಿದರೆ ಜನರಿಗೆ ತೊಂದರೆಯಾಗುತ್ತದೆ. ಲಾಕ್‌ಡೌನ್ ಬದಲು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ' ಎಂದು ಡಾ. ಸುಧಾಕರ್ ಹೇಳಿದರು.