ಕೊರೊನಾ ಪಾಸಿಟಿವ್‌ಯಿದ್ರೂ ಮುಚ್ಚಿಟ್ಟು 2 ದಿನ ಕರ್ತವ್ಯಕ್ಕೆ ಹಾಜರ್; ಫಾರ್ಮಾಸಿಸ್ಟ್ ಸಸ್ಪೆಂಡ್

ಕೊರೊನಾ ಪಾಸಿಟಿವ್ ಬಂದರೂ ಅದನ್ನು ಮುಚ್ಚಿಟ್ಟು ಮುಧೋಳದ ಫಾರ್ಮಾಸಿಸ್ಟ್ ಎರಡು ದಿನ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪಾಸಿಟಿವ್ ವರದಿ ಇದ್ದರೂ ಯಾರಿಗೂ ತಿಳಿಸದಂತೆ ಸಹ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ಕೆಲಸದ ವೇಳೆ ಅಂತರ ಕಾಯ್ದುಕೊಳ್ಳದೇ ಎಲ್ಲರ ಜೊತೆ ಓಡಾಡಿಕೊಂಡಿದ್ದರು.

First Published Apr 30, 2021, 10:25 AM IST | Last Updated Apr 30, 2021, 10:49 AM IST

ಬೆಂಗಳೂರು (ಏ. 30): ಕೊರೊನಾ ಪಾಸಿಟಿವ್ ಬಂದರೂ ಅದನ್ನು ಮುಚ್ಚಿಟ್ಟು ಮುಧೋಳದ ಫಾರ್ಮಾಸಿಸ್ಟ್ ಎರಡು ದಿನ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪಾಸಿಟಿವ್ ವರದಿ ಇದ್ದರೂ ಯಾರಿಗೂ ತಿಳಿಸದಂತೆ ಸಹ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ಕೆಲಸದ ವೇಳೆ ಅಂತರ ಕಾಯ್ದುಕೊಳ್ಳದೇ ಎಲ್ಲರ ಜೊತೆ ಓಡಾಡಿಕೊಂಡಿದ್ದರು. ಇದೀಗ ಜೊತೆಗಿದ್ದವರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ.  ಈ ವಿಚಾರ ಗೊತ್ತಾಗುತ್ತಿದ್ದಂತೆ ಬಾಗಲಕೋಟೆ ಜಿಲ್ಲಾಡಳಿತ ಫಾರ್ಮಾಸಿಸ್ಟನ್ನು ಸಸ್ಪೆಂಡ್ ಮಾಡಿದೆ.

ಕರೆಂಟ್ ಕಟ್...ಆಕ್ಸಿಜನ್ ಬಂದ್, ಓರ್ವ ಸೋಂಕಿತ ಸಾವು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona