ಬೆಂಗ್ಳೂರಲ್ಲಿ ಕೊರೋನಾ ವಾರಿಯರ್ಸ್‌ಗೆ ಸಿಕ್ತಿಲ್ಲ ಆಂಬುಲೆನ್ಸ್..!

ಕಾಮಾಕ್ಷಿಪಾಳ್ಯದ ಎಎಸ್‌ಐ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ರಾತ್ರಿಯಿಂದ ಆಂಬುಲೆನ್ಸ್‌ಗೆ ಕರೆ ಮಾಡಿದರೂ ಯಾರು ಆ ಕಡೆ ಸುಳಿದಿಲ್ಲ. ಠಾಣೆ ಮುಂದೆ ಹೊಯ್ಸಳ ವಾಹನದಲ್ಲಿ ಕುಳಿತು ಎಎಸ್‌ಐ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

First Published Jul 8, 2020, 3:07 PM IST | Last Updated Jul 8, 2020, 3:07 PM IST

ಬೆಂಗಳೂರು(ಜು.08): ಸಿಲಿಕಾನ್ ಸಿಟಿ ಬೆಂಗಳೂರು ಕೊರೋನಾ ಅಟ್ಟಹಾಸಕ್ಕೆ ಅಕ್ಷರಶಃ ಬೆಚ್ಚಿಬಿದ್ದಿದೆ. ಇದರ ನಡುವೆ ಹಲವು ಅವ್ಯವಸ್ಥೆಗಳ ಬಗ್ಗೆ ಸುವರ್ಣ ನ್ಯೂಸ್ ಹಲವು ದಿನಗಳಿಂದ ಬೆಳಕು ಚೆಲ್ಲುತ್ತಲೇ ಬಂದಿದೆ. ಆ ಪಟ್ಟಿಗೆ ಇದೀಗ ಮತ್ತೊಂದು ಸುದ್ದಿ ಸೇರ್ಪಡೆಗೊಂಡಿದೆ.

ಹೌದು, ಕಾಮಾಕ್ಷಿಪಾಳ್ಯದ ಎಎಸ್‌ಐ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ರಾತ್ರಿಯಿಂದ ಆಂಬುಲೆನ್ಸ್‌ಗೆ ಕರೆ ಮಾಡಿದರೂ ಯಾರು ಆ ಕಡೆ ಸುಳಿದಿಲ್ಲ. ಠಾಣೆ ಮುಂದೆ ಹೊಯ್ಸಳ ವಾಹನದಲ್ಲಿ ಕುಳಿತು ಎಎಸ್‌ಐ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಲ್ಯಾಪ್‌ ಟಾಪ್ ಖರೀದಿಸಲು ಪೋಷಕರು ಸಾಲದ ಮೊರೆ..!

ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್‌ಗಾಗಿ ಎಎಸ್‌ಐ ಕಾದು ಕುಳಿತಿದ್ದಾರೆ. ಕೊರೋನಾ ವಾರಿಯರ್ಸ್‌ಗಳಿಗೆ ಹೀಗಾದರೆ ಸಾಮಾನ್ಯರ ಪರಿಸ್ಥಿತಿ ಏನು ಎನ್ನುವ ಪ್ರಶ್ನೆ ಎದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.