Asianet Suvarna News Asianet Suvarna News

ಕೊರೋನಾ ನಾಲ್ಕನೇ ಅಲೆ ಬಗ್ಗೆ ಡಾ. ಸಿ.ಎನ್ ಮಂಜುನಾಥ್‌ ಕೊಟ್ಟ ಎಚ್ಚರಿಕೆ ಇದು..

ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಆಗುತ್ತಿರುವ ಬೆನ್ನಲ್ಲಿಯೇ ರಾಜ್ಯದಲ್ಲಿ ಕರೋನಾವೈರಸ್ ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಇದರ ನಡುವೆ ಬೆಂಗಳೂರಿನಲ್ಲಿ ಕೋವಿಡ್-19ನ ಹೊಸ ತಳಿಯ ಶಂಕೆಯೂ ವ್ಯಕ್ತವಾಗಿದೆ.

ಬೆಂಗಳೂರು (ಏ.25): ರಾಜ್ಯದಲ್ಲಿ ಹೊಸ ಕೋವಿಡ್-19 (Covid 19) ಪ್ರಕರಣಗಳು ವರದಿಯಾಗಿದ್ದು, ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿರುವ ಕಾರಣ, ನಾಲ್ಕನೇ ಅಲೆಯ (Fourth Wave) ಭೀತಿ ಎದುರಾಗಿದೆ.  ಇದರ ನಡುವೆ ಬೆಂಗಳೂರಿನಲ್ಲಿ (Bengaluru) ಕೋವಿಡ್-19 ಹೊಸ ತಳಿಯ ಶಂಕೆಯೂ ವ್ಯಕ್ತವಾಗಿದೆ.

ಮುಂದಿನ ನಾಲ್ಕು ವಾರದಲ್ಲಿ ರಾಜ್ಯದಲ್ಲಿ ಕೊರೋನಾವೈರಸ್ (Coronavirus) ನಾಲ್ಕನೇ ಅಲೆ ದಾಖಲಾಗಲಿದೆ ಎಂದು ಡಾ.ಸಿಎನ್ ಮಂಜುನಾಥ್ (DR CN Manjunath) ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು. ಎಂದು ಕೋವಿಡ್ ಟಾಸ್ಕ್ ಪೋರ್ಸ್ (Covid Task Force) ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ.

ಕೋವಿಡ್‌ 4ನೇ ಅಲೆ ಭೀತಿ: ಕರ್ನಾಟಕದಲ್ಲಿ ಮತ್ತೆ ಟಫ್‌ ರೂಲ್ಸ್‌?, ಸಿಎಂ ಹೇಳಿದ್ದಿಷ್ಟು

ದೆಹಲಿ ಸೇರಿದಂತೆ ಬೇರೆರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲೂ ಇದು ಆರಂಭವಾಗಿದೆ. ವೈರಸ್ ರೂಪಾಂತರಗೊಳ್ಳುವುದು ಸಾಮಾನ್ಯ. ಆ ಕಾರಣಿಂದಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.