Asianet Suvarna News Asianet Suvarna News

ಕೋವಿಡ್‌ 4ನೇ ಅಲೆ ಭೀತಿ: ಕರ್ನಾಟಕದಲ್ಲಿ ಮತ್ತೆ ಟಫ್‌ ರೂಲ್ಸ್‌?, ಸಿಎಂ ಹೇಳಿದ್ದಿಷ್ಟು

*  ವಿಡಿಯೋ ಕಾನ್ಫರನ್ಸ್‌ ಕರೆದಿರುವ ಪ್ರಧಾನಿ ನರೇಂದ್ರ ಮೋದಿ
*  ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿರುವ ಪಿಎಂ 
*  ಪಿಎಂ ಸಭೆ ಬಳಿಕ ರಾಜ್ಯದಲ್ಲಿ ಸ್ಪಷ್ಟ ಸೂಚನೆ ಹೊರಡಿಸುತ್ತೇವೆ: ಸಿಎಂ

CM Basavaraj Bommai React on Covid Precaution in Karnataka grg
Author
Bengaluru, First Published Apr 24, 2022, 12:51 PM IST

ಹುಬ್ಬಳ್ಳಿ(ಏ.24):  ಕೋವಿಡ್‌(Covid-19) ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ(Central Government) ಸೂಚನೆ ನೀಡಿದೆ‌‌. ಸ್ವತಃ ಪ್ರಧಾನಮಂತ್ರಿಗಳೇ ವಿಡಿಯೋ ಕಾನ್ಫರನ್ಸ್‌ ಸಭೆ ಕರೆದಿದ್ದಾರೆ. ಏ. 27 ರಂದು ಪ್ರಧಾನಮಂತ್ರಿಗಳ ವಿಸಿ ಬಳಿಕ‌ ನಡೆಯಲಿದೆ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಪಿಎಂ ಸಭೆ ಬಳಿಕ ರಾಜ್ಯದಲ್ಲಿ ಸ್ಪಷ್ಟ ಸೂಚನೆ ಹೊರಡಿಸುತ್ತೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಬೆಂಗಳೂರಿನ(Bengaluru) ಶಾಲೆಗಳಿಗೆ(Schools) ಬಾಂಬ್‌ ಕರೆ(Bomb Threat) ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಈ ಕುರಿತು ಸಮಗ್ರವಾದ ತನಿಖೆ‌ ನಡೆಯುತ್ತಿದೆ. ಇ-ಮೇಲ್ ಎಲ್ಲಿಂದ ಬಂತು, ಯಾವ ದೇಶದಿಂದ ಬಂದಿದೆ. ಯಾರು ಕಳಿಸಿದ್ದಾರೆ ಎಲ್ಲವನ್ನೂ ತನಿಖೆ(Investigation) ನಡೆಸಲಾಗುವುದು. ಕೆಲವೊಮ್ಮೆ ಇಲ್ಲಿಯೇ ಕುಳಿತು ಕೆಲವರು ಬೇರೆ ದೇಶದಿಂದ ಕಳಿಸಿದಂತೆ ಭಾಸವಾಗುತ್ತೆ. ಇದಕ್ಕೆ ಕೇಂದ್ರದ ಸಹಕಾರದಿಂದ ಇ-ಮೇಲ್‌ ಮೂಲ ಪತ್ತೆ ಹಚ್ಚಲಾಗುವುದು ಅಂತ ಹೇಳಿದ್ದಾರೆ. 

ಕರ್ನಾಟಕದಲ್ಲಿ ಮಾಸ್ಕ್‌ ಹಾಕದ್ದಕ್ಕೆ ದಂಡ ಹಾಕುವ ಸ್ಥಿತಿ ಬಂದಿಲ್ಲ: ಸಚಿವ ಸುಧಾಕರ್‌

ಇನ್ನು ಪಿಎಸ್ಐ ನೇಮಕಾತಿ ಅಕ್ರಮದ(PSI Recruitment Scam) ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ನಾವು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚಿನ ವಿಚಾರಗಳು ಹೊರಬೀಳುತ್ತಿವೆ. ಅಕ್ರಮದಲ್ಲಿ‌ ಭಾಗಿಯಾದವರನ್ನ ಬಂಧಿಸುವಂತೆ ಈಗಾಗಲೇ ಸೂಚನೆ‌ ನೀಡಲಾಗಿದೆ. ಎಷ್ಟೇ ಪ್ರಭಾವಿ ಇರಲಿ, ಎಷ್ಟೇ ಚಾಣಾಕ್ಷ ಇದ್ದರೂ ಬಂಧಿಸುವಂತೆ ಸೂಚಿಸಲಾಗಿದೆ. ನೇಮಕಾತಿ ನ್ಯಾಯ ಸಮ್ಮತವಾಗಿದ್ದರೆ ಜನರಿಗೆ ನ್ಯಾಯ ಸಿಗುಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಹುಬ್ಬಳ್ಳಿ ಗಲಭೆ ಸಾಮಾನ್ಯ ಗಲಭೆ‌ ಅಲ್ಲ: 

ಹುಬ್ಬಳ್ಳಿ ಗಲಭೆಯನ್ನ(Hubballi Riots) ನಾವು ಸಾಮಾನ್ಯ ಗಲಭೆ‌ ಅಂತ ಪರಿಗಣಿಸಿಲ್ಲ. ಇದರ ಹಿಂದೆ ಷಡ್ಯಂತ್ರ ಇದೆ. ಪೊಲೀಸ್ ಠಾಣೆಯನ್ನೇ ಟಾರ್ಗೆಟ್ ಮಾಡಿ, ಸಂಚಿತ ದಾಳಿ ನಡೆಸಲಾಗಿದೆ. ಇದರಲ್ಲಿ ಬೇರೆ ಬೇರೆ ಶಕ್ತಿಗಳ‌ ಕುಮ್ಮಕ್ಕಿನ‌ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಇದರ ಹಿಂದಿನ ಅಸಲಿ ಸತ್ಯ ಬಯಲಿಗೆ ಎಳೆಯಲಾಗುವುದು. ಡಿಜೆ ಹಳ್ಳಿ-ಕೆಜೆ ಹಳ್ಳಿ ಗಲಭೆಯಲ್ಲಿ ಯಾವ ರೀತಿ ಕ್ರಮ ಆಗಿದೆ. ಇಲ್ಲೂ ಅದೇ ಕ್ರಮ ಆಗಲಿದೆ. ಕಠಿಣ ಕ್ರಮ ಅಂದ್ರೇ ಹಲವಾರು ಕ್ರಮಗಳಿವೆ. ಕಠಿಣ ಕ್ರಮದ ವಿಚಾರದಲ್ಲಿ ಕರ್ನಾಟಕವೇ(Karnataka) ಮಾದರಿಯಾಗಿದೆ ಅಂತ ತಿಳಿಸಿದ್ದಾರೆ. 

Corona Crisis: ಸತತ 2ನೇ ದಿನ ಶೇ.2ಕ್ಕಿಂತ ಅಧಿಕ ಕೊರೋನಾ ಪಾಸಿಟಿವಿಟಿ ದರ

ಸಂಪುಟ ವಿಸ್ತರಣೆ(Cabinet Expansion) ಬಗ್ಗೆ ನಾನು ಹೇಳಳು ಆಗುವುದಿಲ್ಲ, ಅದನ್ನು ಪಕ್ಷದ ವರಿಷ್ಠರ ಜೊತೆ ಚರ್ಚೆ ಬಳಿಕ ನಿರ್ಧಾರ ಹೊರಬರಲಿದೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ. 

ಕುತೂಹಲ ಮೂಡಿಸಿದ ಬೊಮ್ಮಾಯಿ- ಬೆಲ್ಲದ ಭೇಟಿ

ಶಾಸಕ ಅರವಿಂದ್ ಬೆಲ್ಲದ(Aravind Bellad) ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸಂಪುಟ ವಿಸ್ತರಣೆ ಬಿಸಿ ಬಿಸಿ ಚರ್ಚೆ ಮಧ್ಯೆ ಬೊಮ್ಮಾಯಿ- ಬೆಲ್ಲದ ಭೇಟಿಯಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ(BS Yediyurappa) ಹಾಗೂ ಮಾಜಿ ಸಚಿವ ಜಗದೀಶ್ ಶೆಟ್ಟರ್(Jagadish Shettar) ವಿರೋಧಿ ಪಾಳಯದಲ್ಲಿ ಶಾಸಕ ಅರವಿಂದ್ ಬೆಲ್ಲದ ಗುರುತಿಸಿಕೊಂಡಿದ್ದರು. 

ನಗರದ ಏರ್ಪೋರ್ಟ್ ರಸ್ತೆಯ ಇಂದ್ರಪ್ರಸ್ಥ ನಗರದಲ್ಲಿರುವ ಬೆಲ್ಲದ ಭವ್ಯ ಬಂಗಲೆಗೆ ಸಿಎಂ ಬೊಮ್ಮಾಯಿ ಆಗಮಿಸಿದ್ದಾರೆ. ಬೆಲ್ಲದ ನಿವಾಸದ ಮುಂದೆ- ದೊಡ್ಡ ಸಂಖ್ಯೆಯಲ್ಲಿ ಜನರು ಜಮಾವಣೆಯಾಗಿದ್ದಾರೆ. ಶಾಸಕ ಅರವಿಂದ್ ಬೆಲ್ಲದ ಸಂಪುಟ ಸೇರೋದು ಪಕ್ಕಾನಾ ಎಂಬುದನ್ನು ಕಾದುನೋಡಬೇಕಿದೆ. 
 

Follow Us:
Download App:
  • android
  • ios