ಹಾಕಿದ್ದು ಲಕ್ಷಾಂತರ ರೂ, ಕೊಳ್ಳುವವರಿಲ್ಲದೇ ಕಲ್ಲಂಗಡಿ ಬೆಳೆದ ರೈತ ಕಂಗಾಲು
ಒಂದೆಡೆ ಕೊರೊನಾ ಸಂಕಷ್ಟ, ಇನ್ನೊಂದೆಡೆ ಬೆಳೆದ ಬೆಳೆಯನ್ನು ಕೇಳುವವರಿಲ್ಲದೇ ರೈತರು ಕಂಗಾಲಾಗುತ್ತಿದ್ದಾರೆ. ಕಲ್ಲಂಗಡಿ ಬೆಳೆದ ವಿಜಯಪುರ ರೈತರೊಬ್ಬರು ಲಕ್ಷಾಂತರ ರೂ ನಷ್ಟ ಅನುಭವಿಸಿದ್ಧಾರೆ.
ಬೆಂಗಳೂರು (ಮೇ. 29): ಒಂದೆಡೆ ಕೊರೋನಾ ಸಂಕಷ್ಟ, ಇನ್ನೊಂದೆಡೆ ಬೆಳೆದ ಬೆಳೆಯನ್ನು ಕೇಳುವವರಿಲ್ಲದೇ ರೈತರು ಕಂಗಾಲಾಗುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದ ರೈತ ಬೀಮನಗೌಡ ಪಾಟೀಲ್, ನಾಲ್ಕೈದು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಸುಮಾರು 4 ಲಕ್ಷ ರೂ ಖರ್ಚು ಮಾಡಿದ್ದರು. ಲಾಕ್‌ಡೌನ್‌ನಿಂದ ಕಲ್ಲಂಗಡಿ ಮಾರಾಟವಾಗದೇ, ಕೊನೆಗೆ ಅವರೇ ಕಿತ್ತು ಹಾಕಿದ್ದಾರೆ. ಬಸನಗೌಡ ಪಾಟೀಲರ ಜೊತೆ ನಮ್ಮ ಪ್ರತಿನಿಧಿ ಮಾತನಾಡಿದ್ಧಾರೆ.
ತಾಯಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಎದೆಹಾಲಿಲ್ಲದೇ 10 ತಿಂಗಳ ಹಸುಗೂಸು ಕಂಗಾಲು