ಕೊರೋನಾ ಮಹಾಸ್ಫೋಟ! ಸಚಿವ ಸುಧಾಕರ್ ಕೊಟ್ಟ ವಾರ್ನಿಂಗ್ ಇದು

ಜುಲೈನಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರುವ ಬಗ್ಗೆ ಪರಿಣಿತರು ತಮಗೆ ಮಾಹಿತಿ ನೀಡಿದ್ದು ಮುನ್ನಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

First Published Jun 10, 2020, 10:48 AM IST | Last Updated Jun 10, 2020, 1:08 PM IST

ಬೆಂಗಳೂರು (ಜೂ. 10): ಜುಲೈನಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರುವ ಬಗ್ಗೆ ಪರಿಣಿತರು ತಮಗೆ ಮಾಹಿತಿ ನೀಡಿದ್ದು ಮುನ್ನಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

ಕಳವು ಕೇಸ್‌ನಲ್ಲಿ ಸಿಕ್ಕಿ ಬಿದ್ದ ಆರೋಪಿಗೂ ಕೊರೊನಾ ಪಾಸಿಟೀವ್; ಪೊಲೀಸರಿಗೆ ಢವಢವ

ಲಾಕ್‌ಡೌನ್ ವೇಳೆ ಜನರಿಂದ ಸಿಕ್ಕ ರೀತಿಯ ಸಹಕಾರ ದೊರೆತರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ತೀವ್ರ ಏರುಗತಿ ಹಂತಕ್ಕೆ ತಲುಪಲಿಕ್ಕಿಲ್ಲ. ಆದರೂ ಅಂಥ ಸ್ಥಿತಿ ಎದುರಿಸಲು ಈಗಾಗಲೇ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಇದೆ. ಸಮೀಕ್ಷೆಗಳ ಮೂಲಕ ಪ್ರತಿಯೊಬ್ಬರ ಮೇಲೆ ನಿಗಾ ಇಡಲಾಗುತ್ತದೆ' ಎಂದರು.