ಇಲ್ಲ ನಿಯಂತ್ರಣ, ಬೆಂಗಳೂರಲ್ಲಿ ಹೆಚ್ಚಾಗ್ತಿದೆ ಕೊರೊನಾ..!

ಸಿಲಿಕಾನ್ ಸಿಟಿಯಲ್ಲಿ ನಿಯಂತ್ರಣವೇ ಇಲ್ಲದೇ ಹೆಚ್ಚಾಗುತ್ತಿದೆ ಕೊರೊನಾ. ಗಂಟೆಗೆ 3 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳ ಕಾಣುತ್ತಿದೆ ಜೊತೆಗೆ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾಂಬೆ, ದೆಹಲಿಗಿಂತ ಬೆಂಗಳೂರಿನಲ್ಲಿಯೇ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. 

First Published Jul 18, 2020, 10:58 AM IST | Last Updated Jul 18, 2020, 10:58 AM IST

ಬೆಂಗಳೂರು (ಜು. 18): ಸಿಲಿಕಾನ್ ಸಿಟಿಯಲ್ಲಿ ನಿಯಂತ್ರಣವೇ ಇಲ್ಲದೇ ಹೆಚ್ಚಾಗುತ್ತಿದೆ ಕೊರೊನಾ. ಗಂಟೆಗೆ 3 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳ ಕಾಣುತ್ತಿದೆ ಜೊತೆಗೆ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾಂಬೆ, ದೆಹಲಿಗಿಂತ ಬೆಂಗಳೂರಿನಲ್ಲಿಯೇ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. 

ಬೆಂಗಳೂರಿನಲ್ಲಿ 582 ಮಂದಿ ಸಾವನ್ನಪ್ಪಿದರೆ, ಬೆಂಗಳೂರು ಹೊರತುಪಡಿಸಿ 29 ಜಿಲ್ಲೆಗಳಲ್ಲಿ 565 ಮಂದಿ ಬಲಿಯಾಗಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆಯೇ ಸದ್ಯದ ಅನಿವಾರ್ಯವಾಗಿದೆ.

'ಗುಣಮುಖರಾದ ಕೊರೊನಾ ಸೋಂಕಿತರ ದ್ರವ ಪರೀಕ್ಷಿಸದೇ ಬಿಡುಗಡೆ ತಪ್ಪು'

ಬೆಂಗಳೂರಿನಲ್ಲಿ ಕೋವಿಡ್ ಸಂಖ್ಯೆ ಒಂದೇ ಸಮನೆ ಏರುತ್ತಿರುವುದಕ್ಕೆ ನಿಯಂತ್ರಣ ಹೇರಲು ಅಷ್ಟ ದಿಕ್ಪಾಲಕರಿಗೆ ಹೈ ಅಲರ್ಟ್ ಎಂದು ಸಿಎಂ ಸೂಚಿಸಿದ್ದಾರೆ. ಮೃತದೇಹಗಳ ತ್ವರಿತ ವಿಲೇವಾರಿಗೂ ಸೂಚಿಸಿದ್ದಾರೆ. ಈ ಬಗ್ಗೆ ಒಂದು ಗ್ರಾಫ್ ಇಲ್ಲಿದೆ ನೋಡಿ..