ರಾಜ್ಯದಲ್ಲಿಂದು ಮೂರು ಸಾವಿರದ ಗಡಿ ದಾಟುತ್ತಾ ಕೊರೋನಾ?
ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 2922 ಆಗಿದ್ದು, ಇನ್ನು ಕೇವಲ 78 ಕೇಸ್‌ಗಳು ಪತ್ತೆಯಾದರೆ ಮೂರು ಸಾವಿರದ ಗಡಿ ದಾಟಲಿದೆ. ಇಂದು ರಾಜ್ಯಕ್ಕೆ ಕಾದಿದೆಯಾ ಗಂಡಾಂತರ ಎನ್ನುವ ಅನುಮಾನ ಶುರುವಾಗಿದೆ.
ಬೆಂಗಳೂರು(ಮೇ.31): ಡೆಡ್ಲಿ ಸೋಂಕು ಕೊರೋನಾ ವೈರಸ್ ರಾಜ್ಯದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ರಣಕೇಕೆ ಹಾಕುತ್ತಾ ಮುನ್ನುಗ್ಗುತ್ತಿದೆ. ಭಾನುವಾರ(ಮೇ.31)ವಾದ ಇಂದೇ ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟುತ್ತಾ ಎನ್ನುವ ಅನುಮಾನ ಆರಂಭವಾಗಿದೆ
ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 2922 ಆಗಿದ್ದು, ಇನ್ನು ಕೇವಲ 78 ಕೇಸ್‌ಗಳು ಪತ್ತೆಯಾದರೆ ಮೂರು ಸಾವಿರದ ಗಡಿ ದಾಟಲಿದೆ. ಇಂದು ರಾಜ್ಯಕ್ಕೆ ಕಾದಿದೆಯಾ ಗಂಡಾಂತರ ಎನ್ನುವ ಅನುಮಾನ ಶುರುವಾಗಿದೆ.
ಕೊರೋನಾ ರಿಪೋರ್ಟ್ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿದ್ದ 600 ಜನ ರಿಲೀಸ್..!
ಯಾದಗಿರಿ, ಬೆಂಗಳೂರು, ಉತ್ತರಕನ್ನಡ. ಉಡುಪಿಗೆ ಕೊರೋನಾ ಶಾಕ್ ನೀಡುವ ಸಾಧ್ಯತೆಯಿದೆ. ರಾಜ್ಯದ 27 ಜಿಲ್ಲೆಗಳ ಕೊರೋನಾ ರಿಪೋರ್ಟ್ ಇಂದು ಹೊರಬೀಳಲಿದ್ದು, 100ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.