ಕಮಿಷನ್ ದಂಧೆಗೆ ಸಂತೋಷ್‌ ಪಾಟೀಲ್‌ ಬಲಿ, ಇತರ ಗುತ್ತಿಗೆದಾರರ ಕಥೆಯೇನು ನೋಡಿ.!

ರಾಜ್ಯ ಸರ್ಕಾರದ ಮೇಲೆ ಕಮೀಷನ್ ಅರೋಪ ಹೊರಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಗಾಗಲೇ ಬಸವರಾಜ ಬೊಮ್ಮಾಯಿ ಸರ್ಕಾರದ ಒಂದು ವಿಕೆಟ್ ಅನ್ನು ಉರುಳಿಸಿದೆ. ಕಮೀಷನ್ ದಂಧೆಗೆ ಸಂತೋಷ್ ಪಾಟೀಲ್ ಏನೋ ಬಲಿಯಾದ್ರು, ಹಾಗಾದ್ರೆ ಉಳಿದ ಗುತ್ತಿಗೆದಾರರ ಕಥೆಯೇನು?

Share this Video
  • FB
  • Linkdin
  • Whatsapp

ಬೆಂಗಳೂರು (ಏ.16): ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಆತ್ಮಹತ್ಯೆ (Suicide) ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ರಾಜ್ಯ ಸರ್ಕಾರದ ಮೇಲೆ ಕಮೀಷನ್ ಆರೋಪ ಹೊರಿಸಿದ್ದ ಸಂತೋಷ್ ಪಾಟೀಲ್, ಆತ್ಮಹತ್ಯೆಯ ಬೆನ್ನಲ್ಲಿಯೇ ತಮ್ಮ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ವ್ಯಾಟ್ಸ್ ಆಪ್ ಮೆಸೇಜ್ ಕೂಡ ಮಾಡಿದ್ದರು. ಹೀಗಾಗಿ ಈಶ್ವರಪ್ಪ ಅವರ ತಲೆದಂಡ ಕೂಡ ಆಗಿದೆ.

ಇನ್ನು ಈಶ್ವರಪ್ಪ (K S Eshwarappa) ಅವರ ಮೇಲಿನ ಭ್ರಷ್ಟಾಚಾರದ ಕುರಿತಾಗಿ ಸಂತೋಷ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ (Prime Minister) ಅವರಿಗೂ ಪತ್ರ ಬರೆದಿದ್ದರು. ಇದಲ್ಲದೆ, ರಾಜ್ಯ ಗುತ್ತಿಗೆದಾರರ ಸಂಘ ಕೂಡ, ರಾಜ್ಯದಲ್ಲಿ ಯಾವುದೇ ಗುತ್ತಿಗೆಗೂ 40 ಪರ್ಸೆಂಟ್ ಕಮೀಷನ್ ಕೊಡಬೇಕು ಎಂದು ಪತ್ರ ಬರೆದಿತ್ತು.

Suicide Case: ಸಂತೋಷ್ ಪಾಟೀಲ್ ಸಾವಿಗೆ ಕಾರಣವಾದ ವಿಷ ಯಾವುದು ಗೊತ್ತಾ ?

ನಮ್ಮ ಕವರ್ ಸ್ಟೋರಿ ತಂಡ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಲು ತೆರಳಿತ್ತು. ಅಲ್ಲಿದ್ದ ಗುತ್ತಿಗೆದಾರರ ಬಳಿ, ವರ್ಕ್ ಆರ್ಡರ್ ಇದ್ಯಾ ಎಂದು ಕೇಳಿದ್ದಕ್ಕೆ ತಬ್ಬಿಬ್ಬಾಗಿದ್ದರು. ಯಾಕೆಂದರೆ, ಅಲ್ಲಿದ್ದವರೆಲ್ಲರೂ ಸಬ್ ಕಂಟ್ರಾಕ್ಟರ್ ಗಳು. ಅಸಲಿಗೆ ಗುತ್ತಿಗೆ ಕೆಲಸದಲ್ಲಿ ಆಗುತ್ತಿರುವುದು ಏನು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

Related Video