10 ಜನಕ್ಕೆ ಕೊರೊನಾ ಬಂದ್ರೆ 17 ಮಂದಿಗೆ ಹರಡುತ್ತೆ ಸೋಂಕು.!

ರಾಜಧಾನಿಯಲ್ಲಿ ಮಹಾಮಾರಿ ಕೊರೋನಾರ್ಭಟ ಜೋರಾಗಿದ್ದು, ಶುಕ್ರವಾರ ಒಂದೇ ದಿನ 3,509 ಹೊಸ ಪ್ರಕರಣ ದಾಖಲಾಗಿವೆ. ಈ ವರ್ಷದಲ್ಲಿ ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ.

First Published Apr 3, 2021, 11:54 AM IST | Last Updated Apr 3, 2021, 11:54 AM IST

ಬೆಂಗಳೂರು (ಏ. 03): ರಾಜಧಾನಿಯಲ್ಲಿ ಮಹಾಮಾರಿ ಕೊರೋನಾರ್ಭಟ ಜೋರಾಗಿದ್ದು, ಶುಕ್ರವಾರ ಒಂದೇ ದಿನ 3,509 ಹೊಸ ಪ್ರಕರಣ ದಾಖಲಾಗಿವೆ. ಈ ವರ್ಷದಲ್ಲಿ ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ.

ನಾನು ರೆಬೆಲ್ ಅಲ್ಲ, ಲಾಯಲ್ ; ಈಶ್ವರಪ್ಪ ಬಹಿರಂಗ ಹೇಳಿಕೆಗೆ ಹೈಕಮಾಂಡ್ ಬೀಗ..!

ಈ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 4,41,242ಕ್ಕೆ ಏರಿಕೆಯಾಗಿದೆ. ಇನ್ನು ಐವರು ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,635ಕ್ಕೆ ಏರಿಕೆಯಾಗಿದೆ. ಈ ನಡುವೆ ಶುಕ್ರವಾರ ಒಂದೇ ದಿನ 693 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 4,12,006ಕ್ಕೆ ಏರಿಕೆಯಾಗಿದೆ. ಇದೇ ವೇಳೆ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,600ಕ್ಕೆ ಏರಿಕೆಯಾಗಿದೆ.