Asianet Suvarna News Asianet Suvarna News

ಬೆಂಗಳೂರಿನ ಮತ್ತೊಂದು ಸ್ಲಂಗೆ ಕೊರೋನಾ ಎಂಟ್ರಿ..!

ಬೆಂಗಳೂರು ನಗರದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರ ಜತೆಗೆ ಬೆಂಗಳೂರಿನಲ್ಲಿ ಕೊರೋನಾ ವಾರಿಯರ್ಸ್‌ಗಳಾದ ವೈದ್ಯರಿಗೂ ಕೊರೋನಾ ಸೋಂಕು ವಕ್ಕರಿಸಿದೆ.
 

ಬೆಂಗಳೂರು(ಜೂ.12): ಕೊರೋನಾ ವೈರಸ್ ಬೆಂಗಳೂರಿನ ಮಂದಿಯನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಪಾದಾರಾಯನಪುರದಲ್ಲಿ ಕೋಲಾಹಲ ಎಬ್ಬಿಸಿದ್ದ ಕೊರೋನಾ ಇದೀಗ ನಿಮ್ಹಾನ್ಸ್ ಪಕ್ಕದ ಗುಲ್ಬರ್ಗ ಸ್ಲಂನಲ್ಲಿ ಕಾಣಿಸಿಕೊಂಡಿದೆ.

ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರ ಜತೆಗೆ ಬೆಂಗಳೂರಿನಲ್ಲಿ ಕೊರೋನಾ ವಾರಿಯರ್ಸ್‌ಗಳಾದ ವೈದ್ಯರಿಗೂ ಕೊರೋನಾ ಸೋಂಕು ವಕ್ಕರಿಸಿದೆ.

ಕೊರೋನಾ ಎದುರಿಸಲು ನಿಜಕ್ಕೂ ಸಜ್ಜಾಗಿದೆಯಾ ಬೆಂಗಳೂರು?

ಒಂದು ಕಡೆ ಸ್ಲಂಗೆ ಕೊರೋನಾ ಎಂಟ್ರಿ ಕೊಟ್ಟಿದ್ದರೆ, ಮತ್ತೊಂದು ಕಡೆ ಡಾಕ್ಟರ್‌ಗೆ ಕೊರೋನಾ ಸೋಂಕು ಅಂಟಿದೆ. ಒಟ್ಟಿನಲ್ಲಿ ಕೊರೋನಾ ಬರೀ ಬಡವನಿಗೆ ಇಲ್ಲವೇ ಶ್ರೀಮಂತನಿಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು, ನಿಯಮಿತವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಿದರೆ ಮಾತ್ರ ಆದಷ್ಟು ಬಚಾವಾಗಬಹುದಾಗಿದೆ.

ಕೊರೋನಾ ವೈದ್ಯರನ್ನೂ ಕಾಡುತ್ತಿದೆ ಎಂದರೆ ನೀವೇ ಯೋಚನೆ ಮಾಡಿ. ಆದಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡರಷ್ಟೇ ಉಳಿಗಾಲ. ಇಲ್ಲದಿದ್ದರೇ ದೇವರು ಬಿಡಿ ಯಾವ ಕೊರೋನಾ ವಾರಿಯರ್ಸ್ ಕೂಡಾ ಕಾಪಾಡಲಾರ. 
 

Video Top Stories