Asianet Suvarna News Asianet Suvarna News

ಹೆಚ್ಚಾಗುತ್ತಿದೆ ಕೋವಿಡ್ ಸೋಂಕು; ಅಸ್ತಮಾ ಇರುವವರೇ ಇರಲಿ ಆರೋಗ್ಯದ ಬಗ್ಗೆ ನಿಗಾ

Oct 5, 2020, 12:20 PM IST

ಬೆಂಗಳೂರು (ಅ. 05): ಇನ್ನೇನು ಚಳಿಗಾಲ ಆರಂಭವಾಗಲಿದೆ. ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಚಳಿಗಾಲದಲ್ಲಿ ಅಸ್ತಮಾ ಇರುವವರು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಉಸಿರಾಡಲು ಕಷ್ಟವಾಗುತ್ತದೆ. ಇಂತವರಿಗೆ ಕೋವಿಡ್ ಸೋಂಕು ತಗುಲಿದ್ರೆ ಗುಣಮುಖವಾಗೋದು ಸ್ವಲ್ಪ ಕಷ್ಟವೇ. ಹಾಗಾಗಿ ಕೋವಿಡ್ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ. 

ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚಳ; ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್ ಕೊರತೆ

ಇನ್ನೊಂದು ಕಡೆ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚಾಗಲು ಶುರುವಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್ ಕೊರತೆ ಶುರುವಾಗಿದೆ. ಹಾಗಾಗಿ ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರುವುದು ಒಳ್ಳೆಯದು...!