
BBMP ಬೇಜವಾಬ್ದಾರಿಗೆ ಮತ್ತೊಂದು ಬಲಿ: ಆಸ್ಪತ್ರೆಗೆ ಅಲೆದು ಅಲೆದು ಪ್ರಾಣ ಬಿಟ್ಟ ಮಹಿಳೆ
ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಕೊರೋನಾ ಸೋಂಕಿತ ಪೌರಕಾರ್ಮಿಕರ ಮಹಿಳೆ ಸಾವು|ನಗರದದ ನಾಗೇನಹಳ್ಳಿ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಹಿಳೆ|
ಬೆಂಗಳೂರು(ಜು.16): ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಕೊರೋನಾ ಸೋಂಕಿತ ಪೌರಕಾರ್ಮಿಕರ ಮಹಿಳೆಯೊಬ್ಬರು ಬಲಿಯಾದ ಘಟನೆ ನಗರದಲ್ಲಿ ನಡೆದಿದೆ. 28 ವರ್ಷದ ಕೊರೋನಾ ಸೋಂಕಿತ ಪೌರಕಾರ್ಮಿಕ ಮಹಿಳೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರಿಂದ ಉಸಿರು ಚೆಲ್ಲಿದ್ದಾಳೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಮಕಿಂಕರ ಕೊರೋನಾ: ಬೆಂಗಳೂರಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್..!
ಮೃತ ಮಹಿಳೆ ನಗರದದ ನಾಗೇನಹಳ್ಳಿ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ತನಗೆ ಮಹಾಮಾರಿ ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಚಿಕಿತ್ಸೆ ಸಿಗದಿದ್ದರಿಂದ ಪ್ರಾಣ ಬಿಟ್ಟಿದ್ದಾಳೆ.